ಮಂಡ್ಯ ಹಾಲು ಒಕ್ಕೂಟದಲ್ಲಿ ಟ್ಯಾಂಕರ್ ನಲ್ಲೇ ನೀರು ಮಿಶ್ರಿತ ಹಾಲು ಪೂರೈಕೆಯಲ್ಲಿ ನಡೆದಿದೆ ಎನ್ನಲಾದ ಕೋಟ್ಯಾಂತರ ರು. ಅವ್ಯವಹಾರದ ತನಿಖೆ ಕುರಿತಂತೆ ವರದಿ ಬಂದ ಬಳಿಕ ಆಡಳಿತ ಮಂಡಳಿ ಕೈವಾಡವಿದ್ದರೆ ಮುಲಾಜಿಲ್ಲದೇ ಸೂಪರ್ ಸೀಡ್ ಮಾಡುವ ಚಿಂತನೆಯನ್ನು ಸರ್ಕಾರಕ್ಕೆ ಮಾಡಿದೆ ಎಂದು ಸಹಕಾರ ಸಚಿವ
ಸೋಮಶೇಖರ್ ಗುರುವಾರ ತಿಳಿಸಿದರು.
ಮನ್‌ಮುಲ್ ಗೆ ಭೇಟಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಸೋಮಶೇಖರ್ ಕೇವಲ ಸೂಪರ್ ಸೀಡ್ ಒಂದೇ ಅಲ್ಲ ನಿರ್ದೇಶಕರು ಇದರಲ್ಲಿ ಭಾಗಿಯಾಗಿದ್ದರೆ ಅವರಿಗೂ ಶಿಕ್ಷೆ
ಅಧಿಕಾರ ಕಿತ್ತು ಕೊಳ್ಳುವುದು ನಮ್ಮ ಯೋಚನೆ ಅಲ್ಲ ಎಂದರು.
ನೀರು ಮಿಶ್ರಿತ ಹಾಲು ಪೂರೈಕೆ ಪ್ರಕರಣದ ತನಿಖೆ ಲೇಟ್ ಆಗ್ತಿಲ್ಲ, ವ್ಯವಸ್ಥಿತವಾಗಿ ನಡೆಯುತ್ತಿದೆ.
ಪ್ರಾಥಮಿಕವಾಗಿ 6ಜನ ಅಧಿಕಾರಿಗಳ ಅಮಾನತು ಆಗಿದೆ ಎಂದರು.
ಸಹಕಾರ ಇಲಾಖೆಯ 64ರ ತನಿಖೆ ನಡೆಯುತ್ತಿದೆ, 2ದಿನದಲ್ಲಿ ವರದಿ ಬರಲಿದೆ. ಎಷ್ಟು ವರ್ಷದಿಂದ ಈ ಹಗರಣ ನಡೆದಿದೆ ಎಂಬುದನ್ನು ತಿಳಿಯಬೇಕು ಎಂದರು.
ಮನ್ ಮುಲ್ ನಲ್ಲಿ ನಡೆದಿದೆ ಎನ್ನಲಾದ ಎಲ್ಲಾ ಅವ್ಯವಹಾರ ಕುರಿತ ಮಾಹಿತಿಗಳನ್ನು ಸಿಎಂ ಗಮನಕ್ಕೆ ತಂದಿದ್ದೇನೆ
ಯಾರು ಎಷ್ಟೇ ಪ್ರಭಾವಿತರಿದ್ದರೂ ತಪ್ಪು ಎಸಗಿದರೆ ಶಿಕ್ಷೆಗೆ ಒಳಪಡಿಸಲು ಸಿಎಂ ಸೂಚಿಸಿದ್ದಾರೆ ಎಂದು ತಿಳಿಸಿದರು.
ರೈತರ ಸಂಸ್ಥೆಗೆ ಅನ್ಯಾಯವಾಗಬಾರದು:
ಎರಡು ಮೂರು ದಿನಗಳಲ್ಲಿ ಪ್ರಕರಣದ ಸಂಪೂರ್ಣ ವರದಿ ಬರಲಿದೆ. ಎಷ್ಟು ಕೋಟಿ ಲಾಸ್ ಆಗಿದೆ. ಕಾರಣ ಯಾರು, ಯಾರಿಂದ ವಸೂಲು ಮಾಡಬೇಕು ಎಂಬ ಬಗ್ಗೆ ಯೂ ಸಂಪೂರ್ಣ ವರದಿ ಬರುತ್ತದೆ ನಂತರ ಉನ್ನತ ತನಿಖೆಗೆ ಸೂಚಿಸಲಾಗುವುದು ಎಂದು ತಿಳಿಸಿದರು.
ಪೊಲೀಸ್ ಇಲಾಖೆಗೂ ಕಟ್ಟುನಿಟ್ಟಿನ ಆದೇಶ ಇದೆ. ಶೀಘ್ರ ಆರೋಪಿಗಳ ಬಂಧನವಾಗಲಿದೆ. ಬೆಂಗಳೂರಿನಲ್ಲಿ ಇದೇ ರೀತಿ ಹಗರಣ ನಡೆದಿದೆ ಎಂಬ ಮಾತು ಕೇಳಿಬಂದಿತ್ತು ಅಲ್ಲಿ ಬ್ಲ್ಯಾಕ್ ಲಿಸ್ಟ್ ಮಾಡಿ ಕಳುಹಿಸಲಾಗಿದೆ. 14 ಒಕ್ಕೂಟಗಳಲ್ಲೂ ಟ್ಯಾಂಕರ್‌ಗಳ ಪರಿಶೀಲನೆ ನಡೆಸಲು ಚಿಂತನೆ
ಯಾವುದೇ ರಾಜಕೀಯ ಒತ್ತಡ ಇಲ್ಲ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- ಮಂಗಳೂರಿನಲ್ಲಿ ಬಾಲಕಿಗೆ ಸಾಮೂಹಿಕ ಅತ್ಯಾಚಾರ – ಮೂವರಿಗೆ ಜೀವಾವಧಿ ಶಿಕ್ಷೆ
- ಥಿಯೇಟರ್ ಮಾಲೀಕನನ್ನು ಕಟ್ಟಿಹಾಕಿ ಮನೆಯ ಕೆಲಸದವರಿಂದ ಕಳ್ಳತನ – ದಂಪತಿ ಬಂಧನ
- ನಾಲ್ವರು ಕೆ.ಎ.ಎಸ್. ಅಧಿಕಾರಿಗಳ ವರ್ಗಾವಣೆ
- ಮುಂದಿನ ಮೂರೂವರೆ ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ: ಸಿಎಂ ಸಿದ್ದರಾಮಯ್ಯ
- ವಕ್ಫ್ ಭೂ ವಿವಾದದ ಕಲೆ ಈಗ ಲಾಲ್ ಬಾಗ್ ಉದ್ಯಾನವನದ ಮೇಲೂ!
More Stories
ನಾಲ್ವರು ಕೆ.ಎ.ಎಸ್. ಅಧಿಕಾರಿಗಳ ವರ್ಗಾವಣೆ
ವಕ್ಫ್ ಭೂ ವಿವಾದದ ಕಲೆ ಈಗ ಲಾಲ್ ಬಾಗ್ ಉದ್ಯಾನವನದ ಮೇಲೂ!
ಮಂಡ್ಯ: ಡಿಸಿ, ಎಸ್ಪಿ ಕಚೇರಿಗಳ ಸಮೀಪದಲ್ಲಿ ಗಾಂಜಾ ಗಿಡಗಳು ಪತ್ತೆ!