ಮೈಸೂರು: ಕ್ಷೀರ ಭಾಗ್ಯ ಹಾಲಿಗೆ ರಾಗಿ ಮಾಲ್ಟ್ ಹಾಕಿ ಪೂರೈಕೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಈಗಾಗಲೇ ಕ್ಷೀರ ಭಾಗ್ಯ ಯೋಜನೆ ಜಾರಿಯಲ್ಲಿದೆ.
ಹಾಲಿಗೆ ರಾಗಿ ಮಾಲ್ಟ್ ಪೌಡರ್ ಹಾಕಿ ಕೊಡಲು ಚಿಂತನೆ ಮಾಡಿದ್ದೇನೆ. ಮೈಸೂರಿನ CFTRIನಲ್ಲಿ ಟೆಸ್ಟ್ ಮಾಡಿಸುತ್ತಿದ್ದೇವೆ. ಶೀರ್ಘದಲ್ಲಿಯೇ ಈ ಯೋಜನೆ ಜಾರಿಗೆ ಬರಲಿದೆ. ನಾವು ಎರಡು ಮೊಟ್ಟೆ ಕೊಡುತ್ತಿದ್ದೇವೆ. ಮಕ್ಕಳ ಪೌಷ್ಠಿಕಾಂಶ ಜಾಸ್ತಿ ಮಾಡಲು ಪ್ರಯತ್ನ ಮಾಡಿದ್ದೇವೆ ಎಂದರು.
ನನ್ನ ಇಲಾಖೆ ತುಂಬಾ ದೊಡ್ಡದು. ಸಿಎಂ ನನಗೆ ಬೇರೆ ಖಾತೆ ನಿಗದಿ ಮಾಡಿದ್ದರು. ಆದರೆ ಡಿ.ಕೆ.ಶಿವಕುಮಾರ್ ಅವರು ಟಫ್ ಇಲಾಖೆ ಕೊಡಿ ಎಂದು ಹೇಳಿದ್ದರು. ಸಿಎಂ ಸಿದ್ದುಗೆ ಜನಪ್ರತಿನಿಧಿಗಳ ಕೋರ್ಟ್‌ನಿಂದ 10 ಸಾವಿರ ದಂಡ
ಡಿಕೆ ಶಿವಕುಮಾರ್ ನನ್ನ ತಂದೆಯವರಿಗೆ ಆತ್ಮೀಯರು. ಸುರ್ಜೇವಾಲ ಅವರೂ ಒಪ್ಪಿದರು. ನನ್ನ ಇಲಾಖೆ ಸವಾಲಿನ ಇಲಾಖೆ, ಸಮಸ್ಯೆಗಳೂ ಇವೆ. 58,000 ಸರ್ಕಾರಿ ಶಾಲೆಗಳಿವೆ. ಒಟ್ಟು 1.20 ಕೋಟಿ ವಿದ್ಯಾರ್ಥಿಗಳು ಇದ್ದಾರೆ.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ