ಬೆಂಗಳೂರು: ಸಂಕ್ರಾಂತಿ ಹಬ್ಬದ ನಂತರ ಹಾಲಿನ ದರವನ್ನು 5 ರೂ. ಹೆಚ್ಚಿಸುವ ಪ್ರಸ್ತಾಪವನ್ನು ಕೆಎಂಎಫ್ (KMF) ಪರಿಷ್ಕರಿಸಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಭೀಮಾನಾಯ್ಕ್ ತಿಳಿಸಿದ್ದಾರೆ.
ಹಾಲಿನ ದರ ಏರಿಕೆ ಪ್ರಸ್ತಾಪ
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭೀಮಾನಾಯ್ಕ್, ಬುಧವಾರ ನಡೆದ ಹಾಲಿನ ಒಕ್ಕೂಟದ ಸಭೆಯಲ್ಲಿ ಹಾಲಿನ ದರವನ್ನು 5 ರೂ. ಹೆಚ್ಚಿಸುವ ಕುರಿತು ಪ್ರಸ್ತಾಪ ಮಂಡಿಸಲಾಗಿದೆ. ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ಹಿಂದೆ ನಂದಿನಿ ಹಾಲಿನಲ್ಲಿ 50 ಎಂಎಲ್ ಹೆಚ್ಚುವರಿ ನೀಡಲಾಗಿತ್ತು, ಅದಕ್ಕಾಗಿ 2 ರೂ. ಹೆಚ್ಚಿಸಲಾಗಿತ್ತು. ಈಗ ಈ ಹೆಚ್ಚುವರಿ ಹಾಲನ್ನು ವಾಪಸ್ ತೆಗೆದುಹಾಕಲಾಗಿದೆ ಎಂದು ಅವರು ತಿಳಿಸಿದ್ದಾರೆ.
50 ಎಂಎಲ್ ಹಾಲು ಕಡಿತಕ್ಕೆ ಕಾರಣ
ಕಳೆದ ಐದು ವರ್ಷಗಳಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿದ್ದ ಕಾರಣ ಕೆಎಂಎಫ್ 50 ಎಂಎಲ್ ಹೆಚ್ಚುವರಿಯಾಗಿ ನೀಡಲು ನಿರ್ಧಾರ ಮಾಡಿತ್ತು. ಆದರೆ, ಈಗ ಉತ್ಪಾದನೆ ಯಥಾಸ್ಥಿತಿಗೆ ಬಂದಿದೆ. ಹೀಗಾಗಿ ಈಗ ಬಾಡ್‌ಕಟ್ಟಿನಂತೆ ಹಾಲನ್ನು ಸರಬರಾಜು ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.
ಇಡ್ಲಿ ದೋಸೆ ಹಿಟ್ಟು ಮಾರಾಟ
ಕೆಎಂಎಫ್ ಬೆಂಗಳೂರಿನಲ್ಲಿ ಹೊಸ ಪ್ರಯತ್ನವನ್ನು ಆರಂಭಿಸಿದ್ದು, ಇಡ್ಲಿ ಮತ್ತು ದೋಸೆ ಹಿಟ್ಟು ಮಾರಾಟಕ್ಕೆ ಮುಂದಾಗಿದೆ. “ಖಾಸಗಿ ಸಂಸ್ಥೆಗಳು ಈ ವ್ಯಾಪಾರದಲ್ಲಿ 30 ಸಾವಿರ ಮೆಟ್ರಿಕ್ ಟನ್ ಹಿಟ್ಟು ಪೂರೈಸುತ್ತಿದ್ದರೆ, ನಾವು 5 ಸಾವಿರ ಮೆಟ್ರಿಕ್ ಟನ್ ಹಿಟ್ಟು ಪೂರೈಸುತ್ತೇವೆ. ಪ್ರಾರಂಭಿಕ ಹಂತದಲ್ಲಿ ಇದನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಲಾಗುತ್ತಿದ್ದು, ಶೀಘ್ರದಲ್ಲೇ ಇತರ ನಗರಗಳಲ್ಲಿ ವಿಸ್ತರಿಸಲಾಗುವುದು,” ಎಂದು ಭೀಮಾನಾಯ್ಕ್ ಹೇಳಿದರು.
ಗುಣಮಟ್ಟದ ಉತ್ಪನ್ನಗಳಿಗೆ ಆದ್ಯತೆ:
“ಎಲ್ಲರಿಗೂ ಪ್ರೋಟೀನ್ ಅಗತ್ಯವಿದೆ, ಹೀಗಾಗಿ ಗುಣಮಟ್ಟದ ಹಿಟ್ಟು ನೀಡಲಾಗುತ್ತದೆ. ಇದು ನಂದಿನಿ ಪಾರ್ಲರ್ ಮತ್ತು ಆನ್‍ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲೂ ಲಭ್ಯವಾಗಲಿದೆ,” ಎಂದು ಮಾಹಿತಿ ನೀಡಿದರು.ಇದನ್ನು ಓದಿ –ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ
ಹಾಲಿನ ದರ ಏರಿಕೆ ಮತ್ತು ಹೊಸ ಉತ್ಪನ್ನ ಪರಿಚಯದ ಈ ನಿರ್ಧಾರಗಳು ಗ್ರಾಹಕರಿಗೆ ಹೇಗೆ ಪ್ರಭಾವ ಬೀರುತ್ತವೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
More Stories
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ
ವಾರಕ್ಕೆ 70 ಗಂಟೆ ಕೆಲಸದ ಮೇಲೆ ಉದ್ಯಮಿ ನಮಿತಾ ಥಾಪರ್ ಪ್ರತಿಕ್ರಿಯೆ