February 20, 2026

Newsnap Kannada

The World at your finger tips!

WhatsApp Image 2022 06 02 at 3.42.52 PM

ಕಾಶ್ಮೀರದ ಕುಲ್ಗಾಮ್ ನಲ್ಲಿ ಹಿಂದೂ ಬ್ಯಾಂಕ್ ಮ್ಯಾನೇಜರ್ ಹತ್ಯೆ ಮಾಡಿದ ಉಗ್ರರು – ವೀಡಿಯೋ ಇಲ್ಲಿದೆ

Spread the love

ಶ್ರೀನಗರದ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಇನ್ನೊಂದು ಹತ್ಯೆ ನಡೆದಿದೆ.

ಗುರುವಾರ ಭಯೋತ್ಪಾದಕರು ಕುಲ್ಗಾಮ್‌ನಲ್ಲಿ ರಾಜಸ್ಥಾನ ಮೂಲದ ಬ್ಯಾಂಕ್ ಮ್ಯಾನೇಜರ್‌ನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಇದನ್ನು ಓದಿ – ತನ್ನನ್ನು ತಾನೇ ಮದುವೆಯಾಗುವ ಯುವತಿ ಗೋವಾದಲ್ಲಿ ಹನಿಮೂನ್ ಅಂತೆ!

ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆ, ಮೋಹನ್ ಪೋರಾದಲ್ಲಿರುವ ಎಲ್ಲಕಿ ದೇಹತಿ ಬ್ಯಾಂಕ್‌ನ ಮ್ಯಾನೇಜರ್ ವಿಜಯ್ ಕುಮಾರ್‌ನನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ರಾಜಸ್ಥಾನದ ಹನುಮಾನ್‌ಗಢ ಮೂಲದ ಕುಮಾರ್‌ನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ಅವರು ಸಾವನ್ನಪ್ಪಿದ್ದಾರೆ.

ಉಗ್ರರ ದಾಳಿಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆಬ, ಹೆಚ್ಚಿನ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ಶೀಘ್ರದಲ್ಲಿ ಆರೋಪಿಗಳ ಪತ್ತೆ ಮಾಡಲಾಗುವುದು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಇದನ್ನು ಓದಿ – ಮಂಡ್ಯದ ಕೆಂಪೇಗೌಡ ಬಡಾವಣೆಯಲ್ಲಿ ದುರಂತ : 1 ವರ್ಷದ ಮಗು ಕಣ್ಣೆದುರೆ ನೇಣಿಗೆ ಶರಣಾದ ತಾಯಿ

ಘಟನೆಯ ಬಳಿಕ ಸೇನಾ, ಅರೆಸೇನಾ ಪಡೆಗಳು ಪ್ರದೇಶವನ್ನು ಸುತ್ತುವರಿದು, ಶೋಧ ಕಾರ್ಯ ಆರಂಭಿಸಿದ್ದಾರೆ.

error: Content is protected !!