February 22, 2026

Newsnap Kannada

The World at your finger tips!

pulvam

ಪುಲ್ವಾಮಾದಲ್ಲಿ ಮನೆಗೆ ನುಗ್ಗಿ, ಮಾಜಿ ಪೊಲೀಸ್ ಅಧಿಕಾರಿ, ಪತ್ನಿ, ಪುತ್ರಿಯನ್ನು ಹತ್ಯೆಗೈದ ಉಗ್ರರು

Spread the love

ಪುಲ್ವಾಮಾದ ಮಾಜಿ ಪೊಲೀಸ್ ಅಧಿಕಾರಿ, ಪತ್ನಿ ಮತ್ತು ಪುತ್ರಿಯನ್ನು ಉಗ್ರರು ಹತ್ಯೆ ಮಾಡಿದ್ದಾರೆ.

ಪುಲ್ವಾಮಾದ ಹರಿಪರಿಗಂ​ ಗ್ರಾಮದಲ್ಲಿರುವ ಮಾಜಿ ಪೊಲೀಸ್​ ಅಧಿಕಾರಿಯ ಮನೆಗೇ ನುಗ್ಗಿದ ಉಗ್ರರು ದಾಳಿ ಮಾಡಿ ಹತ್ಯೆ ಮಾಡಿದ್ದಾರೆ.

ಮಾಜಿ ಎಸ್​​ಪಿಒ ಫಯಾಜ್​ ಅಹ್ಮದ್​ ಮನೆಗೆ ನುಗ್ಗಿದ ಉಗ್ರರು ನಂತರ ಗುಂಡಿನ ದಾಳಿ ನಡೆಸಿದಾಗ ಫಯಾಜ್​ ಸ್ಥಳದಲ್ಲೇ ಮೃತಪಟ್ಟಿದ್ದರು. ಪತ್ನಿ ರಾಜಾ ಬೇಗಂ ಮತ್ತು ಪುತ್ರಿ ರಫಿಯಾ ಗಂಭೀರವಾಗಿ ಗಾಯಗೊಂಡಿದ್ದರು. ಇವರಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ಸೇರಿಸಿದ ಕೆಲವೇ ಹೊತ್ತಲ್ಲಿ ಪತ್ನಿ ರಾಜಾ ಬೇಗಂ ಕೂಡ ಸಾವನ್ನಪ್ಪಿದ್ದಾರೆ.

ಪುತ್ರಿ ರಫಿಯಾಗೆ ಚಿಕಿತ್ಸೆ ಮುಂದುವರಿಸಲಾಗಿತ್ತಾದರೂ ಅವರೂ ಬದುಕಲಿಲ್ಲ. ನಾಪತ್ತೆಯಾದ ಉಗ್ರರ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಜಮ್ಮು-ಕಾಶ್ಮೀರ ವಲಯದ ಪೊಲೀಸರು ತಿಳಿಸಿದ್ದಾರೆ.

ಈ ಅಧಿಕಾರಿಯ ಪುತ್ರ ಸೈನ್ಯದ ಪ್ರಾದೇಶಿಕ ಪಡೆಯಲ್ಲಿ ಸೈನಿಕನಾಗಿದ್ದಾನೆ. ಎರಡು ವರ್ಷಗಳ ಹಿಂದೆ ಫಯಾಜ್​​ಗೆ ರಾಜೀನಾಮೆ ನೀಡುವಂತೆ ಒತ್ತಡ ಬಂದಿತ್ತು. ಆದರೆ ಉಗ್ರರ ಒತ್ತಡಕ್ಕೆ ಮಣಿದಿರಲಿಲ್ಲ.

error: Content is protected !!