January 9, 2025

Newsnap Kannada

The World at your finger tips!

5dc53ac2 6a29 42b5 b16c 0f182fc80cf1

ಮೈಕ್ರೋಸಾಫ್ಟ್ ಆನ್‌ಲೈನ್ ಸೇವೆಗಳ ನ್ಯೂನತೆ ಪತ್ತೆ ಹಚ್ಚಿದ ಚೆನ್ನೈ ಯುವಕನಿಗೆ 36 ಲಕ್ಷ ರು ಬಹುಮಾನ

Spread the love

ಚೆನ್ನೈ ಯುವಕನೊಬ್ಬ‌ ಮೈಕ್ರೋಸಾಫ್ಟ್ ಆನ್‌ಲೈನ್ ಸೇವೆಗಳಲ್ಲಿದ್ದ ನ್ಯೂನತೆ ಸರಿಪಡಿಸಿ 50 ಸಾವಿರ ಡಾಲರ್ (ಸುಮಾರು 36 ಲಕ್ಷ ರೂ.) ಬಹುಮಾನ ಗೆದ್ದಿದ್ದಾರೆ.

ಮೈಕ್ರೋಸಾಫ್ಟ್ ಕಂಪನಿಯ ಆನ್‌ಲೈನ್ ಸೇವೆಗಳಲ್ಲಿದ್ದ ನ್ಯೂನತೆಯನ್ನು ಕಂಡು ಹಿಡಿದಿದ್ದಕ್ಕೆ ಚೆನ್ನೈ ಮೂಲದ ಭದ್ರತಾ ಸಂಶೋಧಕ ಲಕ್ಷ್ಮಣ್ ಮುಥಿಯಾ ಬರೋಬ್ಬರಿ 50 ಸಾವಿರ ಡಾಲರ್ ಬಹುಮಾನ ನೀಡಲಾಗಿದೆ.

ದೊಡ್ಡ ಲೂಪ್‌ ಹೋಲನ್ನು ಮುಥಿಯಾ ಕಂಡುಹಿಡಿದಿದ್ದಾರೆ, ಬಿಲ್ ಗೇಟ್ಸ್ ಒಡೆತನದ ಟೆಕ್ ದೈತ್ಯ ಕಂಪನಿಯ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಮೈಕ್ರೋಸಾಫ್ಟ್ ಖಾತೆಯನ್ನು ಯಾವುದೇ ರೀತಿಯ ಅನುಮತಿಯಿಲ್ಲದೆ ಹ್ಯಾಕ್‌ ಮಾಡಬಹುದಾದಂತಹ ದುರ್ಬಲ ನ್ಯೂನತೆ ಕಂಡು ಬಂದಿತ್ತು.

ಪಾಸ್‌ವರ್ಡ್‌ ರಿಸೆಟ್‌, ರಿಕವರಿ ಕೋಡ್‌ಗೆ ವಿನಂತಿಸುವ ಅಥವಾ ತ್ವರಿತವಾಗಿ ರಿಕವರಿ ಕೋಡ್‌ಗಳನ್ನು ಪಡೆಯಲು ಪ್ರಯತ್ನಿಸುವುದರೊಂದಿಗೆ ಮತ್ತೊಬ್ಬರ ಮೈಕ್ರೋಸಾಫ್ಟ್ ಖಾತೆಯನ್ನು ಸ್ವಾಧೀನಪಡಿಸಿಕೊಳ್ಳಲು ಅವಕಾಶವಿರುವುದನ್ನು ಮುಥಿಯಾ ಕಂಡುಹಿಡಿದಿದ್ದರು. ಈ ನ್ಯೂನತೆ ಬಗ್ಗೆ ಕಂಪನಿಗೆ ತಿಳಿಸಿದ್ದರು. ಅವರ ವರದಿಯನ್ನು ಮೈಕ್ರೋಸಾಫ್ಟ್ ಭದ್ರತಾ ತಂಡವು ಪರಿಶೀಲಿಸಿತ್ತು.

Copyright © All rights reserved Newsnap | Newsever by AF themes.
error: Content is protected !!