ಐಪಿಎಲ್ 20-20ಯ 26 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
ದುಬೈನ ಶೇಕ್ ಜಯೇದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡಿಸಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಡಿಸಿಯಿಂದ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಮೈದಾನಕ್ಕೆ ಎಂಟ್ರಿ ನೀಡಿದ ಪೃಥ್ವಿ ಶಾ ಆಟದ ಆರಂಭದಲ್ಲೇ ನಿರಾಸೆ ಮೂಡಿಸಿದರು. ಕೇವಲ 4 ರನ್‌ಗಳಿಗೆ ಅವರು ಪೆವಿಲಿಯನ್ ಸೇರಿದರು. ಆದರೆ ಶಿಖರ್ ಧವನ್ ಅವರು ಪಂದ್ಯ ಪೂರ್ತಿ ಮೈದಾನದಲ್ಲಿದ್ದು 69 ರನ್ (52 ಎಸೆತಗಳಿಗೆ) ಗಳಿಸಿದರೂ ತಂಡ ಸೋಲಿನ ಹಾದಿಯನ್ನು ಹಿಡಿಯಿತು. ಡಿಸಿ ತಂಡದ ನಾಯಕ ಎಸ್. ಐಯ್ಯರ್ ಕೂಡ ಉತ್ತಮ ಮೊತ್ತವನ್ನು ತಂಡಕ್ಕೆ ನೀಡಿದರೂ ಡಿಸಿ ಸೋಲಿನ ಸುಳಿಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಡಿಸಿ ತಂಡವು 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು.
ಡಿಸಿ ನೀಡಿದ ಗುರಿಯ ಹಿಂದೆ ಬಿದ್ದ ಎಮ್‌ಐ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಹಾಗೂ ಎಮ್‌ಐ ತಂಡದ ನಾಯಕರಾದ ರೋಹಿತ್ ಶರ್ಮಾ ಕೇವಲ 5 ರನ್‌ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. ಆದರೆ ತಂಡದ ಉಪನಾಯಕ ಡಿ. ಕಾಕ್ 36 ಎಸೆತಗಳಿಗೆ 53 ರನ್‌ಗಳ ಮೊತ್ತವನ್ನು ತಂಡಕ್ಕೆ ನೀಡಿ ತಂಡವನ್ನು ಬಲಗೊಳಿಸಿದರು. ರೋಹಿತ್ ಶರ್ಮಾರ ನಂತರದ ಬ್ಯಾಟ್ಸ್‌ಮನ್ ಎಸ್ ಯಾದವ್ ಸಹ 32 ಎಸೆತಗಳಲ್ಲಿ 53 ರನ್ ಗಳಿಕೆ ಮಾಡಿದರು. ಧವನ್ ಹಾಗೂ ಯಾದವ್ ಇಂದು ಎಮ್‌ಐ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಎಮ್‌ಐ ತಂಡ 19.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿ ಜಯಶೀಲರಾದರು.
More Stories
ಮಂಡ್ಯ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ
4 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ – ಬಂಧನ
ಸಮ್ಮೇಳನಾಧ್ಯಕ್ಷ ನಾಡೋಜ ಗೊ.ರು.ಚನ್ನಬಸಪ್ಪರವರಿಗೆ ಅದ್ಧೂರಿ ಸ್ವಾಗತ