March 22, 2025

Newsnap Kannada

The World at your finger tips!

namma metro

ಟಿಕೆಟ್ ದರ ಕಡಿಮೆಯಾಗದ ಮೆಟ್ರೋ ಮಾರ್ಗಗಳು: ಪ್ರಯಾಣಿಕರ ಅಸಮಾಧಾನ ಮುಂದುವರಿಕೆ

Spread the love

ಬೆಂಗಳೂರು, ಫೆಬ್ರವರಿ 15: ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಡುವೆಯೇ, ಬಿಎಂಆರ್‌ಸಿಎಲ್ ಸಂಸ್ಥೆ ಏಕಾಏಕಿ ಟಿಕೆಟ್ ದರ ಶೇಕಡಾ 46ರಷ್ಟು ಏರಿಕೆ ಮಾಡಿತ್ತು. ಈ ದುಪ್ಪಟ್ಟು ದರ ಹೆಚ್ಚಳವು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಪ್ರಯಾಣಿಕರ ವ್ಯಾಪಕ ಅಸಮಾಧಾನ ಹಾಗೂ ಮೆಟ್ರೋ ಪ್ರಯಾಣಿಸುವವರ ಸಂಖ್ಯೆಯಲ್ಲಿನ ಗಣನೀಯ ಇಳಿಕೆಯನ್ನು ಗಮನದಲ್ಲಿ ಇಟ್ಟುಕೊಂಡು, ಬಿಎಂಆರ್‌ಸಿಎಲ್ ಸಂಸ್ಥೆ ಟಿಕೆಟ್ ದರದಲ್ಲಿ ಇಳಿಕೆ ಮಾಡಿದೆ. ಹೊಸ ದರಗಳು ನಿನ್ನೆ ಜಾರಿಗೆ ಬಂದಿವೆ.

ಕೆಲವು ಮಾರ್ಗಗಳಲ್ಲಿ ಹತ್ತು ರೂಪಾಯಿ ದರ ಇಳಿಕೆ ಮಾಡಲಾಗಿದ್ದರೂ, ಇನ್ನೂ ಕೆಲವು ಮಾರ್ಗಗಳಲ್ಲಿ ಮೆಟ್ರೋ ಟಿಕೆಟ್ ದರ ಮೌಲ್ಯದಲ್ಲಿ ಯಾವುದೇ ತಿದ್ದುಪಡಿ ಮಾಡಲಾಗಿಲ್ಲ. ಹೆಚ್ಚಿಸಲಾಗಿದ್ದ ದರವೇ ಪರಿಷ್ಕೃತ ದರವಾಗಿ ಮುಂದುವರಿಯುತ್ತಿದೆ. ಈ ನಿರ್ಧಾರ ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಟಿಕೆಟ್ ದರ ಕಡಿಮೆಯಾಗದ ಮೆಟ್ರೋ ಮಾರ್ಗಗಳು ಈ ಕೆಳಗಿನಂತಿವೆ:

  • ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮಜೆಸ್ಟಿಕ್) ನಿಂದ ಕೆ.ಆರ್.ಪುರಂ ಮೆಟ್ರೋ ನಿಲ್ದಾಣ – 60 ರೂಪಾಯಿ
  • ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮಜೆಸ್ಟಿಕ್) ನಿಂದ ಸೀತಾರಾಮನಪಾಳ್ಯ ಮೆಟ್ರೋ ನಿಲ್ದಾಣ – 60 ರೂಪಾಯಿ
  • ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮಜೆಸ್ಟಿಕ್) ನಿಂದ ಕೋಣನಕುಂಟೆ ಕ್ರಾಸ್ ಮೆಟ್ರೋ ನಿಲ್ದಾಣ – 60 ರೂಪಾಯಿ
  • ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮಜೆಸ್ಟಿಕ್) ನಿಂದ ರಾಜರಾಜೇಶ್ವರಿ ನಗರ ಮೆಟ್ರೋ ನಿಲ್ದಾಣ – 50 ರೂಪಾಯಿ
  • ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮಜೆಸ್ಟಿಕ್) ನಿಂದ ಸಿಂಗಯ್ಯನಪಾಳ್ಯ ಮೆಟ್ರೋ ನಿಲ್ದಾಣ – 60 ರೂಪಾಯಿ
  • ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮಜೆಸ್ಟಿಕ್) ನಿಂದ ಕೆಂಗೇರಿ ಮೆಟ್ರೋ ನಿಲ್ದಾಣ – 60 ರೂಪಾಯಿ

ಇದನ್ನು ಓದಿ –ಆದರ್ಶ ವಿದ್ಯಾಲಯದಲ್ಲಿ 6ನೇ ತರಗತಿ ಪ್ರವೇಶಾತಿ ಆರಂಭ

ಈ ಮಾರ್ಗಗಳಲ್ಲಿ ಮೆಟ್ರೋ ಪ್ರಯಾಣಿಕರು ಟಿಕೆಟ್ ದರ ಇಳಿಕೆ ಮಾಡದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!