ಪ್ರಯಾಣ ದರ ಪರಿಷ್ಕರಣೆ:
ಬಿಎಂಟಿಸಿಎಲ್ ರಚಿಸಿದ ದರ ಪರಿಷ್ಕರಣೆ ಸಮಿತಿಯ ಶಿಫಾರಸ್ಸಿನಂತೆ ಮೆಟ್ರೋ ದರವನ್ನು ಹೆಚ್ಚಿಸಲಾಗಿದೆ. ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಶೇ 5 ರಷ್ಟು ರಿಯಾಯಿತಿ ಮುಂದುವರಿಯಲಿದೆ. ಹೊಸ ದರಗಳಂತೆ 0-2 ಕಿಮೀ ಪ್ರಯಾಣಕ್ಕೆ ₹10 ಮತ್ತು 30 ಕಿಮೀ ಪ್ರಯಾಣಕ್ಕೆ ₹90 ಆಗಿದೆ.
ಪ್ರಯಾಣಿಕರ ಸಂಖ್ಯೆ ಕುಸಿತ:
ದರ ಹೆಚ್ಚಳದ ನಂತರ ಮೆಟ್ರೋ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿದಿದೆ. ಫೆಬ್ರವರಿ 3ರಂದು 8.7 ಲಕ್ಷ ಪ್ರಯಾಣಿಕರಿದ್ದು, ಫೆಬ್ರವರಿ 10ಕ್ಕೆ ಈ ಸಂಖ್ಯೆ 8.2 ಲಕ್ಷಕ್ಕೆ ಕುಸಿದಿದೆ, ಶೇ 4ರಷ್ಟು ಇಳಿಮುಖವಾಗಿದೆ.ಮತ್ತೊಂದೆಡೆ, ಮೆಟ್ರೋ ದರ ಏರಿಕೆಯ ಪರಿಣಾಮ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಫೆಬ್ರವರಿ 3ರಂದು 36.62 ಲಕ್ಷ ಪ್ರಯಾಣಿಕರಿದ್ದು, ಫೆಬ್ರವರಿ 10ಕ್ಕೆ 37.22 ಲಕ್ಷಕ್ಕೆ ಏರಿಕೆಯಾಗಿದೆ.
ರಾಜಕೀಯ ವಾಗ್ಯುದ್ಧ:
ಮೆಟ್ರೋ ದರ ಹೆಚ್ಚಳದ ಕುರಿತು ಬಿಜೆಪಿ ಸರ್ಕಾರವನ್ನು ಟೀಕಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ‘ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 50:50 ಪಾಲುದಾರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ದರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ನಿಯಂತ್ರಣ ಇಲ್ಲ’ ಎಂದು ಅವರು ತಿಳಿಸಿದ್ದಾರೆ.ಇದನ್ನು ಓದಿ -ಇಂಡಿಯನ್ ಆಯಿಲ್ ಲಿಮಿಟೆಡ್‌ನಲ್ಲಿ 456 ಅಪ್ರೆಂಟಿಸ್ ಹುದ್ದೆಗಳ ಭರ್ತಿ – ಅರ್ಜಿ ಆಹ್ವಾನ
ರಾಜ್ಯ ಸರ್ಕಾರದ ಸ್ಪಷ್ಟನೆ:
ಮೆಟ್ರೋ ದರ ಪರಿಷ್ಕರಣೆ ಸಂಬಂಧ ಬಿಎಂಟಿಸಿಎಲ್ 2017ರ ನಂತರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ‘ಪ್ರಯಾಣ ದರ ಹೆಚ್ಚಳದ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲಿದ್ದರೆ, ಏಕೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಯಿತು?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು