February 21, 2026

Newsnap Kannada

The World at your finger tips!

bjp congras

ವಿಧಾನ ಪರಿಷತ್ ಚುನಾವಣೆ ಫಲಿತಾಂಶ BJP 12 + CONG 11+ JDS 1 + IND 1

Spread the love

ರಾಜ್ಯದಲ್ಲಿ ‍25 ವಿಧಾನ ಪರಿಷತ್ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ 12 ಕಾಂಗ್ರೆಸ್ 11 ಜೆಡಿಎಸ್ ಕೇವಲ ಒಂದು, ಪಕ್ಷೇತರ ಅಭ್ಯಥಿ೯ ಗೆಲವು ಸಾಧಿಸಿದ್ದಾರೆ.

ಮಂಡ್ಯ , ಮೈಸೂರುನಲ್ಲಿ
ಕಾಂಗ್ರೆಸ್ ಗೆ ಜಯ :

ಮೈಸೂರುವಿಧಾನ ಪರಿಷತ್ ಚುನಾವಣೆಯಲ್ಲಿ ಮೈಸೂರು, ಮಂಡ್ಯದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ.

ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಆಪ್ತ ಕಾಂಗ್ರೆಸ್‍ನ ಡಾ. ಡಿ.ತಿಮ್ಮಯ್ಯ ಗೆಲುವು ಸಾಧಿಸಿದ್ದಾರೆ.

ಎರಡನೇ ಸ್ಥಾನಕ್ಕೆ ಜೆಡಿಎಸ್-ಬಿಜೆಪಿ ನಡುವೆ ಪೈಪೋಟಿ ನಡೆಯುತ್ತಿದೆ. ಬಿಜೆಪಿಯಿಂದ ಆರ್.ರಘು ಜೆಡಿಎಸ್‍ನಿಂದ ಸಿ.ಎನ್.ಮಂಜೇಗೌಡ ಕಣದಲ್ಲಿದ್ದರು.

ಕ್ಷೇತ್ರದ ಅಸಿಂಧು ಮತಗಳನ್ನು ಬೇರ್ಪಡಿಸುವ ವೇಳೆ ಕಾಂಗ್ರೆಸ್‍ಗೆ ಮೊದಲ ಪ್ರಾಶಸ್ತ್ಯ ಮತಗಳು ಹೆಚ್ಚು ಇವೆ.

ಎರಡನೇ ಸ್ಥಾನಕ್ಕೆ ಜೆಡಿಎಸ್ ಮತ್ತು ಬಿಜೆಪಿ ಪೈಪೋಟಿ ನಡೆಸುತ್ತಿವೆ.

ಜೆಡಿಎಸ್ ಭದ್ರಕೋಟೆಯೇ ಆಗಿದ್ದ ಮಂಡ್ಯದಲ್ಲಿ ಜೆಡಿಎಸ್ ಸೋಲನುಭವಿಸಿದೆ. ಪಕ್ಷದ ಅಭ್ಯರ್ಥಿ ಅಪ್ಪಾಜಿಗೌಡ ಸೋತಿದ್ದಾರೆ, ಕಾಂಗ್ರೆಸ್‍ನ ದಿನೇಶ್ ಗೂಳಿಗೌಡ ಗೆಲುವು ಸಾಧಿಸಿದ್ದಾರೆ.

error: Content is protected !!