ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಜಿಲ್ಲಾಧಿಕಾರಿ ಎಸ್.ಅಶ್ವಥಿ ಅಧಿಸೂಚನೆ ಹೊರಡಿಸಿದ್ದಾರೆ.
ಸೋಮವಾರ ಭದ್ರತಾ ಕೊಠಡಿ ಮತ್ತು ಎಣಿಕಾ ಕೇಂದ್ರಗಳನ್ನು ಗುರುತಿಸಲು ನಗರದ ಸರ್ಕಾರಿ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇಂದಿನಿಂದಲೇ ನಾಮಪತ್ರ ಸಲ್ಲಿಕೆ:
- ಇಂದಿನಿಂದ (ನ.೧೬) ನ . ೨೩ರವರೆಗೆ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ.
- ನ.೨೪ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.
- ೨೬ರಂದು ಉಮೇದುವಾರಿಕೆ ವಾಪಸ್ ಪಡೆಯಲು ಕೊನೆ ದಿನವಾಗಿದೆ.
- ಡಿ.೧೦ರಂದು ಬೆಳಿಗ್ಗೆ ೮ರಿಂದ ಸಂಜೆ ೪ರವರೆಗೆ ಮತದಾನ ನಡೆಯಲಿದೆ.
- ೧೪ರಂದು ಮತ ಎಣಿಕೆ ನಡೆಯಲಿದೆ.
- ೧೬ರಂದು ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
- ನಾಲ್ಕು ನಾಮಪತ್ರ ಸಲ್ಲಿಕೆಗೆ ಅವಕಾಶ:
- ಒಬ್ಬ ಅಭ್ಯರ್ಥಿ ಗರಿಷ್ಠ ೪ ನಾಮಪತ್ರ ಸಲ್ಲಿಸಬಹುದಾಗಿದೆ.
- ನಾಮಪತ್ರದ ಜತೆಗೆ ಆಸ್ತಿ ವಿವರಗಳನ್ನು ಸಲ್ಲಿಸಬೇಕು.
- ಅಭ್ಯರ್ಥಿಯ ವಯಸ್ಸು ೩೦ ವರ್ಷಗಳಿಗೆ ಕಡಿಮೆ ಇರಬಾರದು.
- ೧೦ ಮತದಾರರ ಸೂಚಕ ಸಹಿ ಇರಬೇಕು.
- ಸಾಮಾನ್ಯ ಅಭ್ಯರ್ಥಿ ೧೦ ಸಾವಿರ ರೂ. ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭ್ಯರ್ಥಿಗಳಿಗೆ ೫ ಸಾವಿರ ರೂ. ಠೇವಣಿ ಇಡಬೇಕು.
- ಜಿಲ್ಲೆಯಲ್ಲಿ ೪೦೨೫ ಮತದಾರರು:
- ಮಂಡ್ಯ ನಗರಸಭೆ ಸದಸ್ಯರು, ಆರು ತಾಲೂಕುಗಳ ಪುರಸಭೆ ಸದಸ್ಯರು, ಬೆಳ್ಳೂರು ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಜಿಲ್ಲೆಯ ೨೩೨ ಗ್ರಾಮ ಪಂಚಾಯಿತಿಗಳ ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ.
- ಜಿಲ್ಲೆಯಲ್ಲಿ ಒಟ್ಟು ೪೦೨೫ ಮತದಾರರಿದ್ದಾರೆ.
- ಇದರಲ್ಲಿ ಗ್ರಾಮ ಪಂಚಾಯಿತಿಯ ೩೮೧೮ ಸದಸ್ಯರು,
- ಮಂಡ್ಯ ನಗರಸಭೆ ೩೫,
- ಆರು ತಾಲೂಕುಗಳ ಪುರಸಭೆಯ ೧೫೧,
- ಬೆಳ್ಳೂರು ಪಟ್ಟಣ ಪಂಚಾಯಿತಿ ೧೩,
- ಒಬ್ಬರು ಸಂಸದರು, ೭ ಮಂದಿ ಶಾಸಕರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ.
- ಬಿಜೆಪಿ ಪರಿಷತ್ ಸದಸ್ಯ ಸಿ.ಟಿ. ರವಿ ಬಿಡುಗಡೆ: ಹೈಕೋರ್ಟ್ ತಕ್ಷಣ ಬಿಡುಗಡೆಗೆ ಆದೇಶ
- ಯೂಟ್ಯೂಬ್ ನೋಡಿ ಬೈಕ್ ಕಳವು ತರಬೇತಿ: 13 ಲಕ್ಷ ಮೌಲ್ಯದ 20 ಬೈಕ್ಗಳ ಕಳ್ಳತನ
- ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ
- ಸಿ.ಟಿ. ರವಿ ಮೇಲೆ ಹಲ್ಲೆ: ಕೊಲೆಗೆ ಸಂಚು ರೂಪಿಸಿದ್ದಾರೆಂದು ಆರೋಪ
- ಮಂಡ್ಯ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ
More Stories
ಬಿಜೆಪಿ ಪರಿಷತ್ ಸದಸ್ಯ ಸಿ.ಟಿ. ರವಿ ಬಿಡುಗಡೆ: ಹೈಕೋರ್ಟ್ ತಕ್ಷಣ ಬಿಡುಗಡೆಗೆ ಆದೇಶ
ಯೂಟ್ಯೂಬ್ ನೋಡಿ ಬೈಕ್ ಕಳವು ತರಬೇತಿ: 13 ಲಕ್ಷ ಮೌಲ್ಯದ 20 ಬೈಕ್ಗಳ ಕಳ್ಳತನ
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ