ಮೇಕೆದಾಟು ಯೋಜನೆ – ತ.ನಾಡಿನ‌ ಅನುಮತಿ ಅಗತ್ಯ: ಪ್ರಜ್ವಲ್ ರೇವಣ್ಣ ಪ್ರಶ್ನೆಗೆ ಕೇಂದ್ರದ ಪ್ರತ್ಯುತ್ತರ

Team Newsnap
1 Min Read

ಮೇಕೆದಾಟು ಯೋಜನೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಮ್ಮತಿ ಹಾಗೂ ತಮಿಳುನಾಡು ಸೇರಿ ಮೂರು ರಾಜ್ಯದ ಅನುಮತಿಯೂ ಅಗತ್ಯ ಎಂದು ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಹೇಳಿದೆ.

ಗುರುವಾರ ಸಂಸತ್​ನ ಪ್ರಶ್ನೋತ್ತರ ಕಲಾಪದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಮೇಕೆದಾಟು ಯೋಜನೆಯ ಸ್ಥಿತಿಗತಿ ಬಗ್ಗೆ ಪ್ರಶ್ನೆ ಮಾಡಿದರು.

ಸಂಸದ ಪ್ರಜ್ವಲ್ ಪ್ರಶ್ನೆಗೆ ಉತ್ತರ ನೀಡಿದ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಮೇಕೆದಾಟು ಯೋಜನೆಗೆ ಕರ್ನಾಟಕ ಸರ್ಕಾರ ಸಲ್ಲಿಸಿರುವ ಸಮಗ್ರ ಯೋಜನಾ ವರದಿಗೆ ಕಾವೇರಿ ನಿರ್ವಹಣಾ ಪ್ರಾಧಿಕಾರದ ಅಗತ್ಯ ಇದೆ ಎಂದರು.

ಈ ಯೋಜನೆ ಅಂತರ್ ರಾಜ್ಯ ಯೋಜನೆ ಆಗಿದೆ. ಹೀಗಾಗಿ ಮೂರೂ ರಾಜ್ಯಗಳ ಅನುಮತಿ ಬೇಕೆಂದು ಸಂಸತ್ತಿಗೆ ಕೇಂದ್ರ ಸಚಿವರು ತಿಳಿಸಿದರು.

ಕರ್ನಾಟಕ ಸರ್ಕಾರ ಯೋಜನೆ ಕೈಗೆತ್ತಿಕೊಳ್ಳುವ ಸಂಬಂಧ ಡಿಪಿಆರ್​ (ಸಮಗ್ರ ಯೋಜನೆಯ) ವರದಿ ನೀಡಿದೆ.

ಈ ವರದಿಗೆ ಕೇಂದ್ರ ಸರ್ಕಾರ ಕೆವಲ ತಾತ್ವಿಕ ಒಪ್ಪಿಗೆಯನ್ನ ಮಾತ್ರ ನೀಡಿದೆ. ಆದರೆ ಕಾವೇರಿ ಕಣಿವೆಯ ರಾಜ್ಯಗಳಾದ ತಮಿಳುನಾಡು, ಕೇರಳ ಮತ್ತು ಪುದುಚೇರಿಯ ಅನುಮತಿಯ ಅಗತ್ಯ ಇದೆ ಎಂದರು.

Share This Article
Leave a comment