December 23, 2024

Newsnap Kannada

The World at your finger tips!

90124bb1 610f 42a6 b1b0 43cd67a63e84

ಮೆಹಂದಿ ಸಂಭ್ರಮದಲ್ಲಿ ನಟಿ ಕಾಜಲ್ ಅಗರ್ವಾಲ್‌!

Spread the love

ಮುಂಬೈನಲ್ಲಿ ಶುಕ್ರವಾರ (ಅ.30) ಕಾಜಲ್‌ ಅಗರ್ವಾಲ್ ಹಸೆಮಣೆ ಏರಲಿದ್ದಾರೆ.

ಅದಕ್ಕೂ ಮುನ್ನ  ಮೆಹಂದಿ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಆ ಸಂಭ್ರಮದ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಕಾಜಲ್‌ ಹಂಚಿಕೊಂಡಿದ್ದಾರೆ.

ಬಹುಕಾಲದ ಗೆಳೆಯ ಗೌತಮ್‌ ಕಿಚಲು ಜೊತೆ ಕಾಜಲ್‌ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಎರಡೂ ಕೈಗಳಿಗೆ ಮದರಂಗಿ ಹಾಕಿಕೊಂಡಿರುವ ಕಾಜಲ್‌ ಖುಷಿ ಖುಷಿಯಾಗಿ ಕ್ಯಾಮರಾಗೆ ಪೋಸ್‌ ನೀಡಿದ್ದಾರೆ. ಸಂಭ್ರಮದ ನಡುವೆ ಅಭಿಮಾನಿಗಳಿಗಾಗಿ ಫೋಟೋ ಶೇರ್‌ ಮಾಡಿಕೊಂಡಿದ್ದಾರೆ.

ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿರುವಾಗಲೇ ಬಾಳಬಂಧನಕ್ಕೆ ಒಳಗಾಗಲು ಕಾಜಲ್‌ ನಿರ್ಧರಿಸಿರುವುದು ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಉದ್ಯಮಿ ಗೌತಮ್‌ ಕಿಚಲು ಜೊತೆ ಅವರು ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದಲೂ ಹರಿದಾಡುತ್ತಿತ್ತಾದರೂ ಅದಕ್ಕೆ ಕಾಜಲ್‌ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಕೆಲವೇ ದಿನಗಳ ಹಿಂದೆ ಅವರು ತಮ್ಮ ಮದುವೆ ಸುದ್ದಿಯನ್ನು ಬಹಿರಂಗಪಡಿಸಿದರು. ಮದುವೆ ನಂತರವೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವುದಾಗಿ ಅವರು ಭರವಸೆ ನೀಡಿದ್ದಾರೆ.

‘ಗೌತಮ್‌ ಕಿಚಲು ಜೊತೆ ಮದುವೆ ಆಗುತ್ತಿದ್ದೇನೆ ಎಂದು ತಿಳಿಸಲು ನನಗೆ ತುಂಬಾ ಸಂತೋಷ ಆಗುತ್ತಿದೆ. ಅ.30 ರಂದು ನಮ್ಮ ಮದುವೆ ಮುಂಬೈನಲ್ಲಿ ನೆರವೇರಲಿದೆ. ಕುಟುಂಬದ ಕೆಲವೇ ಸದಸ್ಯರು ಈ ಸಮಾರಂಭದಲ್ಲಿ ಭಾಗಿ ಆಗಲಿದ್ದಾರೆ. ಕೊರೊನಾದಿಂದಾಗಿ ನಮ್ಮ ಸಂಭ್ರಮ ಚೂರು ಮಂಕಾಗಿದೆ. ಆದರೂ ಹೊಸ ಬದುಕು ಆರಂಭಿಸಲು ನಾವು ಥ್ರಿಲ್‌ ಆಗಿದ್ದೇವೆ. ನೀವೆಲ್ಲರೂ ನಮ್ಮನ್ನು ಉತ್ಸಾಹದಿಂದ ಹುರಿದುಂಬಿಸುತ್ತೀರಿ ಎಂಬುದು ತಿಳಿದಿದೆ. ಇಷ್ಟು ವರ್ಷಗಳ ಕಾಲ ನನಗೆ ನೀವೆಲ್ಲ ತೋರಿದ ಪ್ರೀತಿಗೆ ಧನ್ಯವಾದಗಳು. ಈಗ ಹೊಸ ಪಯಣಕ್ಕೆ ನಾವು ನಿಮ್ಮ ಆಶೀರ್ವಾದ ಬಯಸುತ್ತಿದ್ದೇವೆ’ ಎಂದಿದ್ದಾರೆ ಕಾಜಲ್‌.

Copyright © All rights reserved Newsnap | Newsever by AF themes.
error: Content is protected !!