ಬೆಂಗಳೂರು: ಕರ್ನಾಟಕ ಅರಣ್ಯ ಪಡೆಗಳ (Forest Force) ಮುಖ್ಯಸ್ಥೆಯಾಗಿ ಮೀನಾಕ್ಷಿ ನೇಗಿ (Meenakshi Negi) ನೇಮಕಗೊಂಡಿದ್ದಾರೆ. ಇದು ಈ ಹುದ್ದೆಗೆ ಮಹಿಳಾ ಅಧಿಕಾರಿ ನೇಮಕಗೊಂಡಿರುವ ಪ್ರಥಮ ಸಂದರ್ಭವಾಗಿದೆ.
ಮೀನಾಕ್ಷಿ ನೇಗಿ ಉತ್ತರಾಖಂಡ ರಾಜ್ಯದವರು ಹಾಗೂ ಹಿರಿಯ ಐಎಫ್‌ಎಸ್ (IFS) ಅಧಿಕಾರಿಯಾಗಿದ್ದು, 1989ರ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಅಧಿಕಾರಿ. ಅವರು ಕಳೆದ ಮೂರೂವರೆ ದಶಕಗಳಿಂದ ರಾಜ್ಯದಲ್ಲಿ ಸೇವೆ ಸಲ್ಲಿಸಿ, ಬಳ್ಳಾರಿ, ಮಂಡ್ಯ, ಚಿಕ್ಕಮಗಳೂರಿನಲ್ಲಿ ಡಿಸಿಎಫ್ (DCF) ಆಗಿ ಕಾರ್ಯ ನಿರ್ವಹಿಸಿದ್ದರು.
ಮೀನಾಕ್ಷಿ ನೇಗಿ ಈ ಹಿಂದೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯ ಕಾರ್ಯದರ್ಶಿ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಅರಣ್ಯ ಪಡೆಗಳ ಮುಖ್ಯಸ್ಥರ ಆಯ್ಕೆ ಸಂಬಂಧ ಉನ್ನತ ಮಟ್ಟದ ಸಮಿತಿ ಸಭೆ ನಡೆಸಿ ತೀರ್ಮಾನ ಕೈಗೊಂಡು, ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಯಿತು.ಇದನ್ನು ಓದಿ –ಅರ್ಚಕರಿಗೆ ಸೇರಬೇಕಿದ್ದ 1.87 ಕೋಟಿ ಲೂಟಿ – ಮುಜರಾಯಿ ಇಲಾಖೆಯಲ್ಲಿ ಭಾರೀ ಅವ್ಯವಹಾರ
ನಂತರ, ಕೇಂದ್ರ ಸರ್ಕಾರದ ಅನುಮೋದನೆಯೊಂದಿಗೆ ಮೀನಾಕ್ಷಿ ನೇಗಿಯನ್ನು ಅಧಿಕೃತವಾಗಿ ಹುದ್ದೆಗೆ ನೇಮಕ ಮಾಡಲಾಗಿದೆ.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು