November 16, 2024

Newsnap Kannada

The World at your finger tips!

crime,bengaluru,racecourse

ಮೆಡಿಕಲ್ ಸೀಟ್ ಆಮಿಷ : ಹನಿಟ್ರ್ಯಾಪ್ ಮಾಡಿ 1.6 ಕೋಟಿ ರು ವಂಚಿಸಿದ ಯುವತಿಯರೂ ಸೇರಿ ಮೂವರ ಬಂಧನ

Spread the love

ಮಗನಿಗೆ ಬೆಂಗಳೂರಿನ ಎಂಎಸ್ ರಾಮಯ್ಯ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟ್ ಕೊಡಿಸುವುದಾಗಿ ಹೇಳಿ ಕಲಬುರಗಿಯ ವೈದ್ಯರ ಬಳಿ 1.6 ಕೋಟಿ ರು ಕಿತ್ತುಕೊಂಡು ಹನಿಟ್ರ್ಯಾಪ್ ಮೂಲಕ ಬ್ಲಾಕ್ ಮೇಲ್ ಮಾಡಿರುವ ಪ್ರಕರಣ ವರದಿಯಾಗಿದೆ.

ಇದನ್ನು ಓದಿ -‘ರಕ್ಕಮ್ಮ’ಗಾಗಿ ರೀಲ್ಸ್ ಮಾಡಿದ ಕಿಚ್ಚ ಸುದೀಪ್ : ಕನ್ನಡದಲ್ಲೇ ಮಾತನಾಡಿದ ಜಾಕ್ವೆಲಿನ್ ವಿಡಿಯೋ

ಈ ಪ್ರಕರಣಕ್ಕೆಸಂಬಂಧಿಸಿದಂತೆ ನಾಗರಾಜ್ , ಮಧು ಹಾಗೂ ಮತ್ತೊಬ್ಬ ಯುವತಿಯನ್ನು ಬೆಂಗಳೂರಿನ ಸಿಸಿಬಿ ಪೋಲಿಸರು ಬಂಧಿಸಿದ್ದಾರೆ.

ಪ್ರಕರಣದ ವಿವರ :

ಕಳೆದ ಕೆಲವು ದಿನಗಳಿಂದ ಕಲಬುರಗಿಯ ಡಾ. ಶಂಕರ್, ಮಗನಿಗೆ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಕೊಡಿಸೊ ಪ್ರಯತ್ನ ಮಾಡುತ್ತಿದ್ದರು.

ಕಲಬುರಗಿ ವೈದ್ಯ ಡಾ ಶಂಕರ್ ಎಷ್ಟು ಪ್ರಯತ್ನ ಪಟ್ಟರೂ ತಮ್ಮ ಮಗನಿಗೆ ಯಾವುದೇ ಕಾಲೇಜಿನಲ್ಲಿ ಸೀಟು ಸಿಗಲಿಲ್ಲ. ಈ ವೇಳೆ 8 ವರ್ಷದಿಂದ ಪರಿಚಯಸ್ಥನಾಗಿದ್ದ ಆರೋಪಿ ನಾಗರಾಜ್, ಡಾ. ಶಂಕರ್ ಅವರಿಗೆ ಎಂಎಸ್ ರಾಮಯ್ಯ ಕಾಲೇಜಿನಲ್ಲಿ ನಿಮ್ಮ ಮಗನಿಗೆ ಸೀಟು ಕೊಡಿಸುತ್ತೇನೆ. ಅಲ್ಲಿ ನನಗೆ ಪರಿಚಯದವರು ಇದ್ದಾರೆ ಅಂತ ಬಳಂಗ ಮಾಡಿದ.

ಈ ವೇಳೆ ಹಳೆ ಪರಿಚಯ ಕಾರಣಕ್ಕಾಗಿ ಡಾ. ಶಂಕರ್ ಅವರು 66 ಲಕ್ಷವನ್ನು ಕಂತಿನಲ್ಲಿ ಕೊಟ್ಟಿದ್ದಾರೆ. ಆದರೂ ಡಾ. ಶಂಕರ್ ಅವರ ಮಗ ಎಂಬಿಬಿಎಸ್ ಸೀಟು ಸಿಗದೇ ಪರದಾಡುತ್ತಲೇ ಇದ್ದರು.

ಯುವತಿಯರ ಬಳಕೆ ಹನಿಟ್ರ್ಯಾಪ್ ಕುತಂತ್ರ :

ಕೆಲ ದಿನಗಳ ನಂತರ ಡಾ. ಶಂಕರ್ ಅವರನ್ನು ಬೆಂಗಳೂರಿಗೆ ಕರೆಸಿಕೊಂಡ ಆರೋಪಿ ನಾಗರಾಜ್,, ಹನಿಟ್ರ್ಯಾಪ್ ಜಾಲದಲ್ಲಿ ಸಿಕ್ಕಿ ಹಾಕಿಸಿದ. ಆಗ ಹಣ ವಾಪಸ್ ನೀಡದೇ ಮತ್ತೆ 50 ಲಕ್ಷವನ್ನು ಕಿತ್ತುಕೊಂಡನು.1.6 ಕೋಟಿ ರು ಹಣವನ್ನು ಡಾ.ಶಂಕರ್ ಬಾಬುರಾವ್ ಅವರಿಂದ ನಾಗರಾಜ್ ದೋಚಿದ್ದಾನೆ.

ಆರೋಪಿ ನಾಗರಾಜ್ ಸಿನೆಮಾ ಮಾದರಿ ಸೀನ್ ಕ್ರಿಯೇಟ್ ಮಾಡಿದ್ದ ಆರೋಪಿ ನಾಗರಾಜ್​ ಬೆಂಗಳೂರಿನ ಗಾಂಧಿನಗರದ ಲಾಡ್ಜ್ ನಲ್ಲಿ ಪ್ರತ್ಯೇಕ ರೂಮ್ ಬುಕ್ ಮಾಡಿಟ್ಟಿದ್ದಾನೆ. ಮಧ್ಯರಾತ್ರಿ ಆರೋಪಿ ನಾಗರಾಜ್, ಅಣತಿಯಂತೆ ಇಬ್ಬರು ಯುವತಿಯರು ಶಂಕರ್ ಉಳಿದುಕೊಂಡಿದ್ದ ರೂಮಿಗೆ ನುಗ್ಗಿದ್ದಾರೆ.

ಬಳಿಕ ಆತನ ಪಕ್ಕದಲ್ಲಿ ಕುಳಿತುಕೊಂಡಿದ್ದಾರೆ. ಕೆಲ ಹೊತ್ತಿನ ಬಳಿಕ ನಕಲಿ ಪೊಲೀಸರು ರೂಮ್​ಗೆ ಎಂಟ್ರಿ ಕೊಟ್ಟಿದ್ದಾರೆ. ವೇಶ್ಯಾವಾಟಿಕೆ ಜಾಲ ನಡೆಸುತ್ತಿರುವ ಬಗ್ಗೆ ಮಾಹಿತಿ ದೊರೆತಿದ್ದು ರೈಡ್ ಮಾಡಲಾಗಿದೆ ಎಂದಿದ್ದಾರೆ. ಪಕ್ಕದ ರೂಮಿನಲ್ಲಿ ವಾಸ್ತವ್ಯ ಹೂಡಿದ್ದ ನಾಗರಾಜ್, ಹುಡುಗಿಯರು ಇರುವ ಶಂಕರ್ ಪೋಟೊವನ್ನು ಕ್ಲಿಕಿಸಿಕೊಂಡಿದ್ದಾನೆ.

ಮೊದಲು 50 ಲಕ್ಷ ರೂಪಾಯಿ ಪಡೆದು ಆರೋಪಿಗಳು ಕೆಲ ದಿನಗಳು ಸುಮ್ಮನಿದ್ದು
ದಾಳಿ ವೇಳೆ ಬಂಧಿತರಾಗಿರುವ ಯುವತಿಯರಿಗೆ ಬೇಲ್ ಕೊಡಿಸಲು 20 ಲಕ್ಷ ರೂಪಾಯಿ ಹಣ ಕೊಡುವಂತೆ ತಾಕೀತು ಮಾಡಿದ್ದಾರೆ. ಹಣ ನೀಡದಿದ್ದರೆ ಯುವತಿಯರ ಸಮೇತ ನಿನ್ನ ಮನೆಗೆ ಬಂದು ಮಾನಮಾರ್ಯಾದೆ ಹರಾಜು ಹಾಕುವೆ ಎಂದು ವಂಚಕರು ಬೆದರಿಸಿದ್ದಾರೆ. ಇದರಿಂದ ಕಂಗಾಲಾದ ಶಂಕರ್ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಾಥಮಿಕ ತನಿಖೆ ನಡೆಸಿದ್ದ ಪೊಲೀಸರು ಪ್ರಕರಣವನ್ನ ಸಿಸಿಬಿ ಹಸ್ತಾಂತರಿಸಿದ್ದರು. ಇದೀಗ ಮೂವರನ್ನು ವಶಕ್ಕೆ ಪಡೆದುಕೊಂಡಿರುವ ಸಿಸಿಬಿ ಹೆಚ್ಚಿನ ತನಿಖೆ ನಡೆಸುತ್ತಿದೆ.

Copyright © All rights reserved Newsnap | Newsever by AF themes.
error: Content is protected !!