January 29, 2026

Newsnap Kannada

The World at your finger tips!

WhatsApp Image 2021 11 14 at 7.17.20 PM

ನನ್ನ ಮಗ, ಕುಟುಂಬದವರು ಜೆಡಿಎಸ್‍ನಿಂದ ಪರಿಷತ್‍ಗೆ ಸ್ಪರ್ಧೆ ಮಾಡಲ್ಲ: ಜಿಟಿ ದೇವೇಗೌಡ ಸ್ಷಪ್ಟನೆ

Spread the love

ಯಾವುದೇ ಕಾರಣಕ್ಕೂ ನನ್ನ ಮಗ ಅಥವಾ ನಮ್ಮ ಕುಟುಂಬದ ಯಾವ ಸದಸ್ಯರು ಜೆಡಿಎಸ್ ನಿಂದ ಪರಿಷತ್ ಗೆ ಸ್ಪರ್ಧೆ ಮಾಡಲ್ಲ ಎಂದು ಮಾಜಿ ಸಚಿವ ಜಿಟಿ ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ಪರಿಷತ್ ಚುನಾವಣೆ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಜಿಟಿದೇವೇಗೌಡರು ಮೈಸೂರಿನಿಂದ ಪರಿಷತ್ ಚುನಾವಣೆಗೆ ನನ್ನ ಕುಟುಂಬದಿಂದ ಯಾರು ನಿಲ್ಲೋದಿಲ್ಲ. ನನ್ನ ಮಗನೂ ಸ್ಪರ್ಧೆ ಮಾಡೋದಿಲ್ಲ. ಯಾವುದೇ ಕಾರಣಕ್ಕೂ ನಾವು ಜೆಡಿಎಸ್ ನಿಂದ ಪರಿಷತ್ ಗೆ ಸ್ಪರ್ಧೆ ಮಾಡೊಲ್ಲ ಖಡಾ ಖಂಡಿತವಾಗಿ ಹೇಳಿದರು

ನಾನು ಎರಡೂವರೇ ವರ್ಷಗಳಿಂದ ಜೆಡಿಎಸ್ ನಿಂದ ದೂರ ಇದ್ದೇನೆ. ಅವರು ನಮ್ಮನ್ನು ಯಾವುದೇ ಕಾರ್ಯಕ್ರಮಕ್ಕೆ ಕರೆದಿಲ್ಲ, ನಾನು ಹೋಗಿಲ್ಲ. ಈಗ ನಮ್ಮ ಕ್ಷೇತ್ರದಲ್ಲಿ ಅಧ್ಯಕ್ಷನನ್ನು ನೇಮಕ ಮಾಡಿ ನನ್ನ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ ಎಂದು ದೂರಿದರು

ಮಾಜಿ ಪ್ರಧಾನಿ ದೇವೇಗೌಡರು ನನಗೆ ಕರೆ ಮಾಡಿ ಪಕ್ಷ ಬಿಡಬೇಡಿ ಎಂದರು. ಆದರೆ ನಾನು ಅವರಿಗೆ ಕ್ಷಮಿಸಿ ಎಂದು ಹೇಳಿದ್ದೇನೆ ಎಂದು ತಿಳಿಸಿದರು.

ನಿಖಿಲ್ ನನ್ನ ಮನೆಗೆ ಬಂದಿದ್ದರು. ಅವರಿಗೆ ಎಲ್ಲಾ ವಿಷಯ ವಿವರವಾಗಿ ಹೇಳಿದ್ದೇನೆ. ನನಗೆ ಎರಡು ಬಾರಿ ಕುಮಾರಸ್ವಾಮಿ ಮಂತ್ರಿ ಸ್ಥಾನ ತಪ್ಪಿಸಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ನಾನು ಕೇಳಿದ ಮಂತ್ರಿ ಸ್ಥಾನ ಕೊಡಲಿಲ್ಲ ಎಂದು ದೂರಿದರು.

ಕುಮಾರಸ್ವಾಮಿ ಅವರಿಂದ ನನಗೆ ಅನ್ಯಾಯ ಆಗಿದೆ. ಈಗ ನಮ್ಮ ಕುಟುಂಬದಿಂದ ಪರಿಷತ್ ಗೆ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಸುದ್ದಿ ಹರಡಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾವು ಜೆಡಿಎಸ್‍ನಿಂದ ಸ್ಪರ್ಧೆ ಮಾಡೊಲ್ಲ. ಟಿಕೆಟ್ ಕೊಡೋಕೆ ನಾವು ಸಿದ್ಧ ಇದ್ದೇವೆ ಅವರು ತೆಗೆದುಕೊಳ್ಳುತ್ತಿಲ್ಲ ಎಂದು ತೋರಿಸೋಕೆ ಸಾರಾ ಮಹೇಶ್ ಹೀಗೆ ಹೇಳ್ತಿದ್ದಾರೆ ಎಂದು ಆರೋಪಿಸಿದರು.

error: Content is protected !!