February 22, 2026

Newsnap Kannada

The World at your finger tips!

Suresh Kumar

ಮೇ 2 ನೇ ವಾರ ದ್ವಿತೀಯ ಪಿಯುಸಿ, ಜೂನ್ ಮೊದಲ ವಾರದಲ್ಲಿ ಎಸ್​ಎಸ್ ಎಲ್ ಸಿ ಪರೀಕ್ಷೆ – ಸುರೇಶ್ ಕುಮಾರ್

Spread the love

2021 ರ ಮೇ ಎರಡನೇ ವಾರ ದ್ವಿತೀಯ ಪಿಯುಸಿ ಪರೀಕ್ಷೆ ಹಾಗೂ ಜೂನ್ ಮೊದಲ ವಾರದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಗಳನ್ನು ನಡೆಸಲು ಸಿದ್ದತೆ ನಡೆದಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.

ಜಮಖಂಡಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸುರೇಶ್ ಕುಮಾರ್, ಈಗಾಗಲೇ ಶೇಕಡಾ 30ರಷ್ಟು ಪಠ್ಯ ಕಡಿಮೆ ಮಾಡಲಾಗಿದೆ. ಮುಂದಿನ ತರಗತಿ ಕಲಿಕೆಗೆ ಕೊರತೆಯಾಗದಂತೆ ಪಠ್ಯವಿಷಯ ಕಡಿಮೆ ಮಾಡಿದ್ದೇವೆ. ಕೋವಿಡ್ ಕಾರಣದಿಂದ ಪರೀಕ್ಷೆಗೆ ಶಾಲಾ ಮಕ್ಕಳ ಹಾಜರಾತಿ ಕಡ್ಡಾಯವಲ್ಲ ಎಂದು ತಿಳಿಸಿದರು.

ಪರೀಕ್ಷೆ ಯಾವ ರೀತಿ ನಡೆಸಬೇಕು ಅಂತ ಎಸ್‌ಎಸ್​​ಎಲ್​​ಸಿ ಮತ್ತು ಪಿಯು ಮಂಡಳಿಗಳೇ ನಿರ್ಧರಿಸಲಿವೆ ಎಂದು ಹೇಳಿದರು.

error: Content is protected !!