ಬೆಂಗಳೂರಿನ ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿಗೆ ಸೇರಿದ ಎರಡು ಕಾರುಗಳಿಗೆ ಬೆಂಕಿ ಪ್ರಕರಣ ಈಗ ಟ್ವಿಸ್ಟ್ ಸಿಕ್ಕಿದೆ.
ಈ ಕೃತ್ಯದ ಹಿಂದೆ ನಡೆದಿದ್ದ ಬೆಡ್ ಬ್ಲಾಕಿಂಗ್ ದಂಧೆ ಬಯಲು ಮಾಡಿದ್ದೆ ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಹಾಕಲು ಪ್ರಮುಖ ಕಾರಣ ಎನ್ನಲಾಗಿದೆ.
ಕೋವಿಡ್ ಸಮಯದಲ್ಲಿ ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ಸತೀಶ್ ರೆಡ್ಡಿ ನೇತೃತ್ವದಲ್ಲಿ ಬೆಂಗಳೂರಿನ ಲಗಲಿ ನಡೆಯುತ್ತಿದ್ದ ಬೆಡ್ ಬ್ಲಾಕಿಂಗ್ ದಂಧೆ ಬಯಲಿಗೆಳೆದಿದ್ದರು.
ಈ ದಂಧೆಯಲ್ಲಿ ಸತೀಶ್ ರೆಡ್ಡಿ ಆಪ್ತ ಬಾಬು ಸೇರಿದಂತೆ ಹಲವರ ಬಂಧನ ಆಗಿತ್ತು. ಈ ದಂಧೆಯಲ್ಲಿ ಸತೀಶ್ ರೆಡ್ಡಿ ಕೂಡ ಇದ್ದರು ಅನ್ನೋ ಆರೋಪ ಕೂಡ ಕೇಳಿಬಂದಿತ್ತು.. ಈ ಪ್ರಕರಣದಲ್ಲಿ ಹೆಸರೂ ಕೇಳಿ ಬಂದಿದ್ದರೂ ಕೂಡ ಶಾಸಕ ಆರೋಪ ತಳ್ಳಿ ಹಾಕಿದ್ದರು.
ಸತೀಶ್ ರೆಡ್ಡಿ ಬಚಾವ್ ಆಗಲು ತಮ್ಮ ಆಪ್ತನನ್ನು ಜೈಲಿಗೆ ಕಳಿಸಿದ್ದರು.
ಆಪ್ತನನ್ನೇ ಜೈಲಿಗೆ ಕಳಿಸಿದ್ದಕ್ಕಾಗಿ ಆಪ್ತನ ಸಂಬಂಧಿಕರಿಂದಲೇ ಈ ಕೃತ್ಯ ಮಾಡಿಸಿರೋ ಶಂಕೆ ವ್ಯಕ್ತವಾಗಿದೆ.
ಸದ್ಯ ತನಿಖೆ ಆರಂಭಿಸಿರುವ ಪೊಲೀಸರು ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಆಪ್ತರ ಕೈವಾಡ ಇರೋ ಶಂಕೆ, ಮತ್ತು ಬೇಗೂರು ಕೆರೆಯ ಶಿವನ ವಿಗ್ರಹ ವಿಚಾರವಾಗಿಯೂ ನಡೆದ ಘಟನೆ ಬಗ್ಗೆ ಯೂ ತನಿಖೆ ಮಾಡುತ್ತಿದ್ದಾರೆ.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ