January 8, 2025

Newsnap Kannada

The World at your finger tips!

rcb vs dc 2

source - instagram credits - iplt20

ಏಪ್ರಿಲ್ 9ರಿಂದ ಮೇ 30ರ ವೆರೆಗೆ ಐಪಿಎಲ್- ಬೆಂಗಳೂರಲ್ಲೂ ಪಂದ್ಯಗಳು

Spread the love

ಏಪ್ರಿಲ್ 9ರಿಂದ ಮೇ 30ರ ವರೆಗೆ ಐಪಿಎಲ್ ನಡೆಯಲಿದೆ. ಬೆಂಗಳೂರಿನಲ್ಲೂ ಪಂದ್ಯಗಳು ನಡೆಯಲಿವೆ ಎಂದು ವರದಿಯಾಗಿದೆ.

ಐಪಿಎಲ್‍ನ 2021ನೇ ಆವೃತ್ತಿ ಭಾರತದಲ್ಲೇ ನಡೆಯಲಿವೆ. ಏಪ್ರಿಲ್ 9 ರಿಂದ ಪಂದ್ಯ ಆರಂಭವಾಗುವ ನಿರೀಕ್ಷೆ ಇದೆ.

ಕಳೆದ ಬಾರಿ ಯುಎಇಯಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲಾಗಿತ್ತು. ಶಾರ್ಜಾ, ಅಬುಧಾಬಿ ಹಾಗೂ ದುಬೈ ಕ್ರೀಡಾಂಗಣಗಳಲ್ಲಿ ಐಪಿಎಲ್ ಪಂದ್ಯಗಳು ನಡೆದಿದ್ದವು. ಆದರೆ ಈ ಬಾರಿ ಭಾರತದಲ್ಲೇ ನಡೆಯುತ್ತಿವೆ.

ಬೆಂಗಳೂರು, ಚೆನ್ನೈ, ಅಹ್ಮದಾಬಾದ್, ದೆಹಲಿ, ಕೋಲ್ಕತ್ತಾ ಹಾಗೂ ಮುಂಬೈ ಒಟ್ಟು 6 ಸ್ಥಳಗಳಲ್ಲಿ ನಡೆಯಲಿವೆ.‌ ಏಪ್ರಿಲ್ 9ರಿಂದ ಮೇ 30ರ ವರೆಗೆ 52 ದಿನಗಳ ಕಾಲ ಒಟ್ಟು 60 ಪಂದ್ಯಗಳು ನಡೆಯಲಿವೆ ಎನ್ನಲಾಗಿದೆ.

ಬಿಸಿಸಿಐ ಈಗಾಗಲೇ ದೇಶೀಯ ಪಂದ್ಯಾವಳಿಗಳಾದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಹಾಗೂ ವಿಜಯ್ ಹಜಾರೆ ಟ್ರೋಫಿಗಳನ್ನು ಕೊರೊನಾ ನಡುವೆ ಯಶಸ್ವಿಯಾಗಿ ನಡೆಸಿದೆ.

ಅಲ್ಲದೆ ಭಾರತ- ಇಂಗ್ಲೆಂಡ್ ಸರಣಿ ನಡೆಸಲು ಸಹ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದೇ ರೀತಿ ಐಪಿಎಲ್‍ನ್ನು ಸಹ ನಡೆಸಲಿದೆ ಎನ್ನಲಾಗಿದೆ.

Copyright © All rights reserved Newsnap | Newsever by AF themes.
error: Content is protected !!