ಈ ಶತಮಾನದಲ್ಲಿ ವಿಶ್ವದಾದ್ಯಂತ ಮಾನವ ಜನಾಂಗವನ್ನು ತೀವ್ರರೀತಿಯಲ್ಲಿ ಕಾಡಿತ್ತಿರುವ ಕೋವಿಡ್-19ಕ್ಕೆ ಲಸಿಕೆ ಕಂಡು ಹಿಡಿಯುವಲ್ಲಿ ವಿಶ್ವದ ಪ್ರಮುಖ ದೇಶಗಳಲ್ಲಿ ಪ್ರಯೋಗಗಳು ನಡೆಯುತ್ತಿದ್ದು ಯಶಸ್ಸಿನ ಹಂತಕ್ಕೆ ಬರಲಾಗುತ್ತಿದೆ ಎಂದು ಸಿಹಿಸುದ್ದಿ ಪ್ರತಿದಿನ ಮಾಧ್ಯಮಗಳಲ್ಲಿ ಬರುತ್ತಿರುವ ಈ ಸಂದರ್ಭದಲ್ಲೇ ಶೀಘ್ರದಲ್ಲೇ ಲಸಿಕೆ ಲಭ್ಯವಾಗಲಿದೆ ಎಂದು ಮಾಹಿತಿಯೂ ಹೊರಬಿದ್ದಿದೆ.
ಪ್ರಥಮ ಹಂತದಲ್ಲಿ ಕರೋನ ಲಸಿಕೆಯನ್ನು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸಂಗ್ರಹಸಿಡುವ ಬಗ್ಗೆಈಗಾಗಲೇ ಸಿದ್ಧತೆ ನಡೆಯುತ್ತಿದೆ. ಸಿಲಿಕಾನ್ ಸಿಟಿಯ ಟೌನ್‍ಹಾಲ್ ಸಮೀಪದ ದಾಸಪ್ಪ ಆಸ್ಪತ್ರೆಯಲ್ಲಿ ಈ ಮಹತ್ವದ ಲಸಿಕೆ ಸಂಗ್ರಹಿಸಿಡಲು ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಬೃಹತ್ ಬೆಂಗಳೂರು ಮಹಾ ನಗರಪಾಲಕೆ ಮುಂದಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಆಸ್ಪತ್ರೆ ಸುತ್ತ ಸಿಸಿಟಿವಿ ಅಳವಡಿಸಲು ಬಿಬಿಎಂಪಿ ಕ್ರಮಕೈಗೊಂಡಿದೆ. ಲಸಿಕೆ ಸಾಗಿಸಲು ವಿಶೇಷ ವಾಹನ ಸೌಲಭ್ಯಕ್ಕೂ ಅಧಿಕಾರಿಳು ಸಜ್ಜಾಗಿದ್ದಾರೆ. ಈ ವೇಳೆ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಲಸಿಕೆ ಸಂಗ್ರಹಿಸಿಡುವ ಪೆಟ್ಟಿಗಳ ಪರಿಶೀಲನೆ ಮಾಡಿದರು.
ಈಗಾಗಲೇ ಬಾಗಲಕೋಟೆಯಲ್ಲೂ ಲಸಿಕೆ ಸಂಗ್ರಹದ ಕೋಲ್ಡ್ ಸ್ಟೋರೇಜ್ ನಿರ್ಮಾಣವಾಗಿದ್ದು, ಅದು 55 ಲಕ್ಷ ವ್ಯಾಕ್ಸಿನ್ ಸಂಗ್ರಹಿಸಿಡುವ ಸಾಮಥ್ರ್ಯ ಹೊಂದಿದೆ. ಈ ಕೋಲ್ಟ್ ಸ್ಟೋರೇಜ್ ನಿಂದ ಕೊಪ್ಪಳ, ವಿಜಯಪುರ, ಬಾಗಲಕೋಟೆ, ಗದಗ ಜಿಲ್ಲೆಗಳಿಗೆ ವ್ಯಾಕ್ಸಿನ್ ಹಂಚಿಕೆ ಮಾಡಬಹುದಾಗಿದೆ.
ಸರ್ಕಾರವಂತೂ ಲಸಿಕೆ ವಿತರಣೆಗೆ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದು, ಶ್ರೀರಾಮನಿಗೆ ಶಬರಿ ಕಾದಂತೆ, ಯಾವಾಗ ಲಸಿಕೆ ಬರುತ್ತದೋ ಎಂದು ಕಾಯುವಂತಾಗಿದೆ.
- ಮೈಸೂರು ಜೈಲಿನಲ್ಲಿ ಮೂವರು ಕೈದಿಗಳ ದುರ್ಮರಣ
- ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಮದುವೆ ಸಹಾಯಧನ: ₹60,000 ಪಡೆಯಲು ಅರ್ಜಿ ಆಹ್ವಾನ!
- ಮಾದಕ ವಸ್ತುಗಳ ಅಕ್ರಮ ಮಾರಾಟ: ಮೂವರು ಆರೋಪಿಗಳು ಬಂಧನ
- ಕೆನಡಾವನ್ನು ಅಮೆರಿಕಾದ 51ನೇ ರಾಜ್ಯವನ್ನಾಗಿ ಮಾಡಲು ಟ್ರಂಪ್ ಆರ್ಥಿಕ ಒತ್ತಡದ ಬೆದರಿಕೆ
- ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ: ಆದಾಯಕ್ಕಿಂತ ಅಧಿಕ ಆಸ್ತಿ ಆರೋಪ
More Stories
ಮೈಸೂರು ಜೈಲಿನಲ್ಲಿ ಮೂವರು ಕೈದಿಗಳ ದುರ್ಮರಣ
ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಮದುವೆ ಸಹಾಯಧನ: ₹60,000 ಪಡೆಯಲು ಅರ್ಜಿ ಆಹ್ವಾನ!
ಮಾದಕ ವಸ್ತುಗಳ ಅಕ್ರಮ ಮಾರಾಟ: ಮೂವರು ಆರೋಪಿಗಳು ಬಂಧನ