April 2, 2025

Newsnap Kannada

The World at your finger tips!

police 1

ಚಾಮರಾಜನಗರದ ಮಾದೇಶ್ವರ ಮತ್ತು ಕಾವೇರಿ ವನ್ಯಧಾಮದಲ್ಲಿ ಭಾರೀ ಅರಣ್ಯ ಬೆಂಕಿ

Spread the love
  • ಕಿಡಿಗೇಡಿಗಳ ಕೃತ್ಯ ಎನ್ನುವ ಶಂಕೆ

ಚಾಮರಾಜನಗರ: ಕೆಲ ದಿನಗಳ ಹಿಂದೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸಂಭವಿಸಿದ ಬೆಂಕಿ ಅವಘಡದ ಬಳಿಕ, ಈಗ ಚಾಮರಾಜನಗರ ಜಿಲ್ಲೆಯ ಮಾದೇಶ್ವರ ಹಾಗೂ ಕಾವೇರಿ ವನ್ಯಧಾಮಗಳಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿದೆ.

ಅಗ್ನಿ ಅವಘಡದ ವಿವರ:
ಮಹದೇಶ್ವರ ವನ್ಯಧಾಮದ ಹನೂರು ವಲಯದ ಹೂಗ್ಯಮ ಪಿ.ಜಿ ಪಾಳ್ಯ ಅರಣ್ಯ ಪ್ರದೇಶದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಅದೇ ರೀತಿ, ಕಾವೇರಿ ವನ್ಯಧಾಮದ ಕೊತ್ತನೂರು ಮತ್ತು ಅಲ್ದಾಳು ಪ್ರದೇಶಗಳಲ್ಲೂ ಅಗ್ನಿ ಅವಘಡ ನಡೆದಿದೆ. ಬೆಂಕಿಯ ಪರಿಣಾಮವಾಗಿ ನೂರಾರು ಎಕರೆಯ ಅರಣ್ಯ ಪ್ರದೇಶ ಭಸ್ಮವಾಗಿದೆ.

ಇದನ್ನು ಓದಿ –ಕುಟುಂಬದ ನಾಲ್ವರು ಮತ್ತು ಗೆಳತಿಯನ್ನು ಹತ್ಯೆಗೈದು ಪೊಲೀಸರಿಗೆ ಶರಣಾದ ಯುವಕ

ಅರಣ್ಯ ಇಲಾಖೆ ತುರ್ತು ಕಾರ್ಯಾಚರಣೆ:
ಅಗ್ನಿ ನಿಯಂತ್ರಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು ತಕ್ಷಣ ಕಾರ್ಯಾಚರಣೆ ನಡೆಸಿದ್ದಾರೆ. ಅಗ್ನಿ ಅನಾಹುತಕ್ಕೆ ಕಿಡಿಗೇಡಿಗಳ ಕೈವಾಡವಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಆದರೆ ಕೊನೆಗೂ ಅರಣ್ಯ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!