Main News

ಮಾರುತಿ ಸುಜುಕಿಯ ದಾಖಲೆ ಮಾರಾಟ

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಕಾರುಗಳ ಕಂಪನಿಯು ಈ ವರ್ಷ 30.8% ರಷ್ಟು ಹೆಚ್ಚು ಕಾರುಗಳನ್ನ ಮಾರಾಟ ಮಾಡಿ ದಾಖಲೆ ಸೃಷ್ಟಿಸಿದೆ.

2020ರ ಸೆಪ್ಟೆಂಬರ್‌ನಲ್ಲಿ ಕಂಪನಿಯು ಮಾರಾಟ ಮಾಡಿದ ಒಟ್ಟು ಘಟಕಗಳ ಸಂಖ್ಯೆ 160,442. ಸೆಪ್ಟೆಂಬರ್ 2019ಕ್ಕೆ ಹೋಲಿಸಿದಲ್ಲಿ‌ ಈ ವರ್ಷ ಅಧಿಕ ಕಾರುಗಳ ಮಾರಾಟವಾಗಿದೆ. ದೇಶಿಯವಾಗಿ ಮಾರಾಟ ಮಾಡಿದ ಘಟಕಗಳ ಸಂಖ್ಯೆ 150,040, ಇತರ ಒಇಎಂಗಳಿಗೆ 2,568 ಘಟಕಗಳು ಮಾರಾಟವಾಗಿದೆ. ಸೆಪ್ಟೆಂಬರ್ 2020 ರಲ್ಲಿ ರಫ್ತು ಮಾಡಲಾದ ಘಟಕಗಳ ಸಂಖ್ಯೆ 7,834 ಆಗಿದೆ‌.

2ನೇ ತ್ರೈಮಾಸಿಕದಲ್ಲಿ (ಎಫ್‌ವೈ 2020-21) ಒಟ್ಟು 393,130 ಘಟಕಗಳ ಮಾರಾಟದ ಮೂಲಕ ಸುಜುಕಿಯು 16.2%ರ ಸಾಧಾರಣ ಬೆಳವಣಿಗೆ ದಾಖಲಿಸಿದೆ. ಆದರೆ, ಕೋವಿಡ್ ಹಿನ್ನಲೆಯಲ್ಲಿ ಹಿಂದಿನ ವರ್ಷದ ಮಾರಾಟಕ್ಕಿಂತ H1 ಏಪ್ರಿಲ್-ಸೆಪ್ಟೆಂಬರ್ (FY2019-20) ಗಿಂತ 36.6% ನಷ್ಟು ಕುಸಿದಿದೆ.

ಪ್ರತಿಯೊಬ್ಬ ಸದಸ್ಯರ ಆರೋಗ್ಯ, ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಕಂಪನಿ ಬದ್ಧವಾಗಿದ್ದು, ಉತ್ಪಾದನೆ ಮತ್ತು ಮಾರಾಟ ಕಾರ್ಯಾಚರಣೆಗಳಲ್ಲಿ ಗ್ರಾಹಕರ ಹಾಗೂ ನೌಕರರ ಸುರಕ್ಷತೆಯ ದೃಷ್ಟಿಯಿಂದ ಎಲ್ಲ ಮುಂಜಾಗ್ರತೆಗಳನ್ನು ಕಂಪನಿ ತೆಗೆದುಕೊಂಡಿರುತ್ತದೆಂದು ಪ್ರಕಟಣೆ ಹೇಳುತ್ತದೆ.

Team Newsnap
Leave a Comment
Share
Published by
Team Newsnap

Recent Posts

ಸಮೀರ್ ಆಚಾರ್ಯ ದಂಪತಿ ಗಲಾಟೆ: ಪೊಲೀಸ್ ಠಾಣೆಯಲ್ಲಿ ವಿಚಾರಣೆ

ಬೆಂಗಳೂರು: ಮಾಜಿ ಬಿಗ್ ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ ಮತ್ತು ಪತ್ನಿ ಶ್ರಾವಣಿ ನಡುವೆ ದಾಂಪತ್ಯ ಕಲಹ ಉಂಟಾಗಿದ್ದು,ಈ ಜೋಡಿ… Read More

September 30, 2024

ಗಂಡು ಮಗುವನ್ನು ಜೀವಂತವಾಗಿ ಹೂತು ಹಾಕಿದ ಅಮಾನವೀಯ ಘಟನೆ

ಬೆಂಗಳೂರು: ಬೆಂಗಳೂರಿನಲ್ಲಿ ಕಟಕಟಿಯ ಘಟನೆ ಸಂಭವಿಸಿದ್ದು, ಜೀವಂತ ಗಂಡು ಮಗುವನ್ನು ನಿರ್ಜನ ಪ್ರದೇಶದಲ್ಲಿ ಹೂತು ಹಾಕಲಾಗಿದೆ. ನಗರದ ಆನೇಕಲ್ ತಾಲೂಕಿನ… Read More

September 30, 2024

ರೈಲ್ವೇ ಇಲಾಖೆ : 14,298 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪುನಾರಂಭ

ಉದ್ಯೋಗ ಹಂಬಲಿಸುವವರಿಗೆ ಭಾರತೀಯ ರೈಲ್ವೇ ಇಲಾಖೆ ಸಂತೋಷದ ಸುದ್ದಿ ನೀಡಿದೆ. ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್ಬಿ) ತನ್ನ ಹಳೆಯ ನೇಮಕಾತಿಗಳನ್ನು… Read More

September 30, 2024

ಅಕ್ಕಿಯ ಬೆಲೆಯಲ್ಲಿ ಭಾರೀ ಏರಿಕೆಗೆ

ದೇಶಾದ್ಯಂತ ಅಕ್ಕಿಯ ಬೆಲೆ ತೀವ್ರವಾಗಿ ಏರಿಕೆಯಾಗಿದ್ದು, HMT, BPT ಮತ್ತು ಸೋನಮಸೂರಿ ಶ್ರೇಣಿಯ ಅಕ್ಕಿಯ ಬೆಲೆಗಳು ಪ್ರತಿ ಕ್ವಿಂಟಾಲ್ಗೆ 200… Read More

September 30, 2024

‘ಒಂದು ದೇಶ, ಒಂದು ಚುನಾವಣೆ’ಗಾಗಿ ಕೇಂದ್ರ ಸರ್ಕಾರ 3 ಮಸೂದೆಗಳನ್ನು ಮಂಡಿಸಲು ಸಿದ್ಧ

ನವದೆಹಲಿ: ನರೇಂದ್ರ ಮೋದಿ ಸರ್ಕಾರವು 'ಒಂದು ದೇಶ-ಒಂದು ಚುನಾವಣೆ' ಯೋಜನೆಯನ್ನು ಜಾರಿಗೆ ತರಲು ಕ್ರಮಗಳನ್ನು ತೆಗೆದುಕೊಂಡಿದ್ದು, ಈ ಉದ್ದೇಶಕ್ಕೆ ಸಂಬಂಧಿಸಿದ… Read More

September 30, 2024

KSRTC ಬಸ್ ಕಂಟೈನರ್ ಗೆ ಡಿಕ್ಕಿಯಾಗಿ 20 ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ

ಮಂಡ್ಯ: ಬೆಂಗಳೂರಿನಿಂದ ಮಂಡ್ಯ ಕಡೆ ಸಾಗುತ್ತಿದ್ದ KSRTC ಬಸ್, ಬೆಳಗ್ಗೆ ಬೆಳಕಿನ ವೇಳೆ, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟೈನರ್ ಗೆ… Read More

September 30, 2024