ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಕಾರುಗಳ ಕಂಪನಿಯು ಈ ವರ್ಷ 30.8% ರಷ್ಟು ಹೆಚ್ಚು ಕಾರುಗಳನ್ನ ಮಾರಾಟ ಮಾಡಿ ದಾಖಲೆ ಸೃಷ್ಟಿಸಿದೆ.
2020ರ ಸೆಪ್ಟೆಂಬರ್‌ನಲ್ಲಿ ಕಂಪನಿಯು ಮಾರಾಟ ಮಾಡಿದ ಒಟ್ಟು ಘಟಕಗಳ ಸಂಖ್ಯೆ 160,442. ಸೆಪ್ಟೆಂಬರ್ 2019ಕ್ಕೆ ಹೋಲಿಸಿದಲ್ಲಿ ಈ ವರ್ಷ ಅಧಿಕ ಕಾರುಗಳ ಮಾರಾಟವಾಗಿದೆ. ದೇಶಿಯವಾಗಿ ಮಾರಾಟ ಮಾಡಿದ ಘಟಕಗಳ ಸಂಖ್ಯೆ 150,040, ಇತರ ಒಇಎಂಗಳಿಗೆ 2,568 ಘಟಕಗಳು ಮಾರಾಟವಾಗಿದೆ. ಸೆಪ್ಟೆಂಬರ್ 2020 ರಲ್ಲಿ ರಫ್ತು ಮಾಡಲಾದ ಘಟಕಗಳ ಸಂಖ್ಯೆ 7,834 ಆಗಿದೆ.
2ನೇ ತ್ರೈಮಾಸಿಕದಲ್ಲಿ (ಎಫ್‌ವೈ 2020-21) ಒಟ್ಟು 393,130 ಘಟಕಗಳ ಮಾರಾಟದ ಮೂಲಕ ಸುಜುಕಿಯು 16.2%ರ ಸಾಧಾರಣ ಬೆಳವಣಿಗೆ ದಾಖಲಿಸಿದೆ. ಆದರೆ, ಕೋವಿಡ್ ಹಿನ್ನಲೆಯಲ್ಲಿ ಹಿಂದಿನ ವರ್ಷದ ಮಾರಾಟಕ್ಕಿಂತ H1 ಏಪ್ರಿಲ್-ಸೆಪ್ಟೆಂಬರ್ (FY2019-20) ಗಿಂತ 36.6% ನಷ್ಟು ಕುಸಿದಿದೆ.
ಪ್ರತಿಯೊಬ್ಬ ಸದಸ್ಯರ ಆರೋಗ್ಯ, ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಕಂಪನಿ ಬದ್ಧವಾಗಿದ್ದು, ಉತ್ಪಾದನೆ ಮತ್ತು ಮಾರಾಟ ಕಾರ್ಯಾಚರಣೆಗಳಲ್ಲಿ ಗ್ರಾಹಕರ ಹಾಗೂ ನೌಕರರ ಸುರಕ್ಷತೆಯ ದೃಷ್ಟಿಯಿಂದ ಎಲ್ಲ ಮುಂಜಾಗ್ರತೆಗಳನ್ನು ಕಂಪನಿ ತೆಗೆದುಕೊಂಡಿರುತ್ತದೆಂದು ಪ್ರಕಟಣೆ ಹೇಳುತ್ತದೆ.
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ