ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಡಾ. ಗುರುಪ್ರೀತ್ ಕೌರ್ ಗುರುವಾರ ಸಪ್ತಪದಿ ತುಳಿದರು.ಸಿಖ್ ಸಂಪ್ರದಾಯದಂತೆ ಗುರುದ್ವಾರದಲ್ಲಿ ಮದುವೆ ನಡೆಯಿತು.
ಇದೊಂದು ಖಾಸಗಿ ಸಮಾರಂಭವಾಗಿದ್ದು, ಕೆಲವೇ ಗಣ್ಯರು ಹಾಗೂ ಎರಡು ಕುಟುಂಬಗಳ ಆಪ್ತರ ಸಮ್ಮುಖದಲ್ಲಿ ಭಗವಂತ್ ಮಾನ್ ಮತ್ತು ಗುರುಪ್ರೀತ್ ಕೌರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ, ಎಎಪಿ ನಾಯಕ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.
ವೃತ್ತಿಯಲ್ಲಿ ವೈದ್ಯೆಯಾಗಿರುವ ಗುರುಪ್ರೀತ್ ಕೌರ್ ಕುರುಕ್ಷೇತ್ರ ಜಿಲ್ಲೆಯ ಪೆಹೊವಾ ಮೂಲದವರು. ಅವರ ತಂದೆ ಇಂದ್ರಜಿತ್ ಸಿಂಗ್ ಓರ್ವ ರೈತ. ಅವರ ತಾಯಿ ರಾಜ್ ಕೌರ್ ಗೃಹಿಣಿ.
ಬೆಂಗಳೂರಿನಲ್ಲಿ PU ವಿದ್ಯಾರ್ಥಿಗಳು ಕಾಲೇಜಿಗೆ ಬೈಕ್ ತರುವಂತಿಲ್ಲ : ತಂದ್ರೆ ಕೇಸ್ ದಾಖಲು
48 ವರ್ಷದ ಮುಖ್ಯಮಂತ್ರಿ ಭಗವಂತ್ ಮಾನ್ ಈ ಹಿಂದೆ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿದ್ದರು. 6 ವರ್ಷಗಳ ಹಿಂದೆ ತಮ್ಮ ಮೊದಲ ಪತ್ನಿ ಇಂದ್ರಪ್ರೀತ್ ಕೌರ್ ಅವರಿಂದ ಡಿವೋರ್ಸ್ ಪಡೆದುಕೊಂಡಿದ್ದಾರೆ. ಮಾಜಿ ಪತ್ನಿ ಹಾಗೂ ಮಕ್ಕಳು ಅಮೆರಿಕದಲ್ಲಿ ನೆಲೆಸಿದ್ದಾರೆ. ಇದು ಅವರ ಎರಡನೇ ಮದುವೆಯಾಗಿದ್ದು, 32 ವರ್ಷದ ಗುರುಪ್ರೀತ್ ಕೌರ್ ಮತ್ತು ಭಗವಂತ್ ಮಾನ್ ನಡುವೆ 16 ವರ್ಷಗಳ ವಯಸ್ಸಿನ ಅಂತರವಿದೆ.
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ