ಮದುವೆಗೆ ಸಿದ್ದತೆ ಆಗಿತ್ತು. ಆದರೆ ವರ ಕೈ ಕೊಟ್ಟ. ಮದುವೆ ಹಿಂದಿನ ದಿನವೇ ವರ ಮತ್ತು ಪ್ರೇಯಸಿ ಜೊತೆ ಎಸ್ಕೇಪ್ ಆಗಿ ದೇವಸ್ಥಾನದಲ್ಲಿ ವಿವಾಹವಾದ ಪ್ರಕರಣ ಜರುಗಿದೆ
ಮದುವೆ ಅಂದರೆ ಕೆಲವರಿಗೆ ಮಕ್ಕಳಾಟವಾಗಿದೆ. ಮದುವೆ ನಿಶ್ಚಯ ಮಾಡಿದ ನಂತರ ತಾಳಿ ಕಟ್ಟದೆ ವರ ಪರಾರಿ ಪ್ರಕರಣಗಳು ಸಾಕಷ್ಟು ವರದಿಯಾಗುತ್ತವೆ. ಈಗ ತಾಜಾ ಪ್ರಕರಣ ಇಲ್ಲಿದೆ.
ಮೈಸೂರಿನ ಸುಣ್ಣದ ಕೇರಿಯ ಉಮೇಶ್ ಎಂಬಾತನಿಗೆ ಮದುವೆ ನಿಶ್ಚಯವಾಗಿತ್ತು. ವಧುವಿನ ಮನೆಯವರು ಮದುವೆಗೆ ಭರದ ಸಿದ್ಧತೆ ಮಾಡಿದ್ದರು. ವರನ ಪೋಷಕರು ಕೂಡ ಮದುವೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.
ವರ , ಬೇರೊಬ್ಬ ಯುವತಿಯನ್ನು ಲೌವ್ ಮಾಡುತ್ತಿದ್ದ. ಈ ಸಂಗತಿ ಮುಚ್ಚಿಟ್ಟು ಮತ್ತೊಬ್ಬಳ ಜೊತೆ ಈಗ ಮದುವೆ ನಿಶ್ಚಯಾಡಿಕೊಂಡಿದ್ದ.
ಇತ್ತ ಎರಡು ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ನೆಂಟರು ಮದುವೆಗೆ ಬರುವ ತಯಾರಿಯಲ್ಲಿದ್ದರು.ಆದರೆ ವರ ಸೋಮುವಾರವೇ ವಧುವಿಗೆ ಕೈ ಕೊಟ್ಟು ಪ್ರೇಯಸಿ ಜೊತೆ ಪರಾರಿಯಾಗಿದ್ದಾನೆ.ಮದುವೆ ರದ್ದಾದ ಕಾರಣ ವಧುವಿನ ಮನೆಯವರು ಕಂಗಾಲಾಗಿದ್ದಾರೆ.
ಪ್ರೇಯಸಿ ಜೊತೆ ಮದುವೆ ಆಗುವ ಪ್ಲಾನ್ ಇದ್ದರೆ ಮತ್ತೊಂದು ಹುಡುಗಿಯ ಜೊತೆ ನಿಶ್ಚಿತಾರ್ಥ ಏಕೆ ಮಾಡಿಕೊಳ್ಳಬೇಕಿತ್ತು ಎಂಬ ಪ್ರಶ್ನೆಗೆ ಸಧ್ಯಕ್ಕೆ ಉತ್ತರ ಇಲ್ಲ.
ಮದುವೆ ದಿನದ ತನಕ ಯಾವುದನ್ನೂ ಹೇಳದೆ ಏಕೆ ಮೌನವಾಗಿದ್ದ ಎಂದು ವಧುವಿನ ಮನೆಯವರು ವರನ ಮನೆಯವರಿಗೆ ಕೇಳುವ ಪ್ರಶ್ನೆಗೂ ಉತ್ತರವಿಲ್ಲ.
ಮಗ ಹೀಗೆ ಮಾಡುತ್ತಾನೆ ಅಂತ ಆತನ ತಂದೆ-ತಾಯಿ ನಿರೀಕ್ಷಿಸಿರಲಿಲ್ಲ. ಮಗ ಪರಾರಿ ಆಗಿ ವರನ ಪೋಷಕರನ್ನು ಪೇಚಿಗೆ ಸಿಲುಕಿಸಿದ್ದಾನೆ.ಮೈಸೂರಿನ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ