ಬೆಂಗಳೂರು: ರಾಜ್ಯ ಸರ್ಕಾರವು ನೋಂದಾಯಿತ ಕಾರ್ಮಿಕರಿಗೆ ಹೊಸ ಸಹಾಯಧನ ಯೋಜನೆ ಘೋಷಿಸಿದೆ. ಈ ಯೋಜನೆಯಡಿಯಲ್ಲಿ, ಕಾರ್ಮಿಕರ ಸ್ವಂತ ಮದುವೆ ಅಥವಾ ಅವರ ಮಕ್ಕಳ ಮದುವೆಗೆ ₹60,000 ಸಹಾಯಧನ ನೀಡಲಾಗುತ್ತದೆ.
ಯೋಜನೆಯ ಮುಖ್ಯ ಅಂಶಗಳು:
- ಯಾರು ಅರ್ಹರು?
- ನೋಂದಾಯಿತ ಕಾರ್ಮಿಕರು ತಮ್ಮ ಮೊದಲ ಮದುವೆಗೆ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ.
- ಕಾರ್ಮಿಕನ ಇಬ್ಬರು ಅವಲಂಬಿತ ಮಕ್ಕಳ ಮದುವೆಗೆ ಸಹಾಯಧನ ಪಡೆಯಬಹುದು.
- ಸಹಾಯಧನದ ಮೊತ್ತ:
ಮದುವೆಯ ವೆಚ್ಚವನ್ನು ಭರಿಸಲು ₹60,000/- ಸಹಾಯಧನ ನೀಡಲಾಗುತ್ತದೆ.
ಅರ್ಜಿಗಾಗಿ ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆಯ ವಿವರಗಳು
- ಮದುವೆ ಪ್ರಮಾಣಪತ್ರ
- ಮದುವೆ ಕರ್ನಾಟಕದ ಹೊರಗೆ ನಡೆದಿದ್ದಲ್ಲಿ ಅಫಿಡವಿಟ್
ಅರ್ಜಿ ಸಲ್ಲಿಸುವ ಪ್ರಕ್ರಿಯೆ:
- ಮೊದಲು https://karbwwb.karnataka.gov.in/kn ಗೆ ಭೇಟಿ ನೀಡಿ.
- ಲಾಗಿನ್ ಆಗಿ ಅಥವಾ ಹೊಸದುವಾಗಿ ನೋಂದಣಿ ಮಾಡಿಕೊಳ್ಳಿ.
- “Schemes” ವಿಭಾಗದಲ್ಲಿ “ಮದುವೆ ಸಹಾಯಧನ” ಆಯ್ಕೆ ಮಾಡಿ.
- ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಕೊನೆಗೆ “Submit” ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
ಮುಖ್ಯ ಸೂಚನೆಗಳು:
- ಮದುವೆಯಾದ ದಿನಾಂಕದಿಂದ ಮೊದಲ ಒಂದು ವರ್ಷದಲ್ಲಿ ಸದಸ್ಯತ್ವವನ್ನು ಪೂರೈಸಿರಬೇಕು.
- ವಿವಾಹ ನೋಂದಣಾ ಪ್ರಮಾಣಪತ್ರವನ್ನು ಸಲ್ಲಿಸಬೇಕು.
- ಮದುವೆಯಾದ ದಿನಾಂಕದಿಂದ 6 ತಿಂಗಳೊಳಗೆ ಅರ್ಜಿಯನ್ನು ಸಲ್ಲಿಸಬೇಕು.
- ಕಾರ್ಮಿಕನ ಕುಟುಂಬವು ಒಟ್ಟು ಎರಡು ಬಾರಿ ಮಾತ್ರ ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿರುತ್ತದೆ.
ಇದನ್ನು ಓದಿ -ಮಾದಕ ವಸ್ತುಗಳ ಅಕ್ರಮ ಮಾರಾಟ: ಮೂವರು ಆರೋಪಿಗಳು ಬಂಧನ
ಈ ಹೊಸ ಯೋಜನೆಯಿಂದ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ದೊಡ್ಡಮಟ್ಟದಲ್ಲಿ ಆರ್ಥಿಕ ನೆರವು ಲಭ್ಯವಾಗಲಿದೆ.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು