January 5, 2025

Newsnap Kannada

The World at your finger tips!

9bfb6b1e a0dd 4e66 b737 23600ee571c9

ಆಸ್ಪತ್ರೆಯ ಬೆಡ್ ಮೇಲೆ ಕುಳಿತು ಕೊಂಡೇ ಯುವತಿಗೆ ತಾಳಿ ಕಟ್ಟಿದ !

Spread the love

ತನ್ನ ಮದುವೆ ಅದ್ಧೂರಿಯಾಗಿ ನಡೆಯಬೇಕೆಂಬ ಕನಸು ಕಂಡಿದ್ದ ಯುವಕ ವಿಧಿಯಾಟ ಬೇರೆ ಆಗಿದ್ದರಿಂದ ಆಸ್ಪತ್ರೆ ಬೆಡ್ ನಿಂದಲೇ ಆತ ವಧುವಿಗೆ ತಾಳಿ ಕಟ್ಟುವ ಸ್ಥಿತಿ ಕೇರಳದ ತಿರುವನಂತಪುರಂ ಜಿಲ್ಲೆಯ ವೆಂಬಾಯಮ್ ನಲ್ಲಿ ಘಟನೆ ನಡೆದಿದೆ.

ಮನೋಜ್ ಹಾಗೂ ರೇವತಿ ಆಸ್ಪತ್ರೆಯಲ್ಲಿ ಮದುವೆಯಾಗುವ ಮೂಲಕ ಸದ್ಯ ಭಾರಿ ಸುದ್ದಿಯಲ್ಲಿ ಇದ್ದಾರೆ.

ಮನೋಜ್ ಹಾಗೂ ರೇವತಿಯ ಮದುವೆ ಫೆಬ್ರವರಿ 4ರಂದು ನಡೆಯಬೇಕಿತ್ತು. ಮನೋಜ್ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾದ ಅನಿವಾರ್ಯ ಬಂತು.

3aa0d85b 4273 4a09 834c a308541c5318

ಈ ಹಿನ್ನೆಲೆಯಲ್ಲಿ ಮದುವೆಯ ಕನಸು ಕಂಡಿದ್ದ ಮನೋಜ್ ಆಸ್ಪತ್ರೆಗೆ ದಾಖಲಾದರು. ಈ ಮೂಲಕ ಎರಡು ಕುಟುಂಬಗಳ ಅದ್ಧೂರಿ ಮದುವೆಗೆ ತಣ್ಣೀರೆರಚಿದಂತಾಗಿತ್ತು.

ಈ ನಿರಾಸೆಯನ್ನು ಬದಿಗೊತ್ತಿ ಎರಡು ಕುಟುಂಬಗಳು ಕೂಡ ತಮ್ಮ ಮಕ್ಕಳಿಗೆ ಆಸ್ಪತ್ರೆಯಲ್ಲಿಯೇ ಮದುವೆ ಮಾಡಲು ನಿರ್ಧರಿಸಿದರು.

ಅಂತೆಯೇ ಫೆಬ್ರವರಿ 6ರಂದು ಖಾಸಗಿ ಆಸ್ಪತ್ರೆಯಲ್ಲಿಯೇ ವಿಶೇಷವಾಗಿ ವಿವಾಹ ಸಮಾರಂಭ ನೆರವೇರಿಸಿದ್ದಾರೆ. ಇಬ್ಬರ ಕುಟುಂಬ ಹಾಗೂ ಆಸ್ಪತ್ರೆಯ ಸಿಬ್ಬಂದಿ ಸಮ್ಮುಖದಲ್ಲಿ ಮನೋಜ್ ಹಾಗೂ ರೇವರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಆಸ್ಪತ್ರೆಯ ರೂಂನ್ನು ಮದುವೆ ಮಂಟಪವಾಗಿ ಮಾರ್ಪಾಡು ಮಾಡಿ ವಧು ಹಾಗೂ ವರರ ಮದುವೆ ನೆರವೇರಿಸಲಾಗಿದೆ. ಬೆಡ್ ನಲ್ಲಿ ಮಲಗಿದ್ದಲ್ಲಿದ್ದಂದ್ಲೇ ಮನೋಜ್ ರೇವತಿಗೆ ತಾಳಿ ಕಟ್ಟಿದರು.
ವಿವಾಹ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಿಇಓ ಡಾ. ಪಿ ಅಶೋಕ್, ಡಾ. ಲೈಜಾ ಮತ್ತು ಸಿಬ್ಬಂದಿ ಭಾಗಿಯಾಗಿದ್ದರು.

Copyright © All rights reserved Newsnap | Newsever by AF themes.
error: Content is protected !!