February 22, 2026

Newsnap Kannada

The World at your finger tips!

druva

ಮಾರುಕಟ್ಟೆ, ಬಸ್ ಫುಲ್ ಇರುತ್ತೆ: ಚಿತ್ರ ಮಂದಿರಕ್ಕೆ ಶೇ. 50 ರಷ್ಟು ಪ್ರೇಕ್ಷಕರು? ನಟ ಧ್ರುವ ಸರ್ಜಾ ಅಸಮಾಧಾನ

Spread the love

ಮಾರ್ಕೆಟ್​ನಲ್ಲಿ ಗಿಜಿಗಿಜಿ ಜನ. ಬಸ್​​ನಲ್ಲೂ ಫುಲ್ ರಶ್​. ಆದರೆ ಚಿತ್ರಮಂದಿರಗಳಿಗೆ ಮಾತ್ರ ಶೇ. 50ರಷ್ಟು ಜನರಿಗೆ ಮಾತ್ರ ಅವಕಾಶ ಯಾಕೆ ಎಂದು ನಟ ಧ್ರುವ ಸರ್ಜಾ ಪ್ರಶ್ನೆ ಮಾಡಿದ್ದಾರೆ.

ಈ ಕುರಿತಂತೆ ಟ್ವಿಟ್ ಮಾಡಿರುವ. ಧ್ರುವ
ಚಿತ್ರಮಂದಿರಗಳಲ್ಲಿ ಶೇ. 100ರಷ್ಟೂ ಪ್ರೇಕ್ಷಕರು ಕುಳಿತು ಸಿನಿಮಾ ವೀಕ್ಷಿಸಬಹುದು ಎಂದು ಕೇಂದ್ರ ಸರ್ಕಾರ ಕಳೆದ ವಾರವಷ್ಟೇ ಹೇಳಿದ್ದರೂ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿ, ಶೇ. 50ರಷ್ಟು ಮಾತ್ರ ಅವಕಾಶ ನೀಡಿರುವ ಹಿನ್ನಲೆಯನ್ನು ಪ್ರಶ್ನೆ ಮಾಡಿದ್ದಾರೆ.

ತಮ್ಮ ಟ್ವೀಟ್​ಗೆ ಮುಖ್ಯಮಂತ್ರಿ ಯಡಿಯೂರಪ್ಪ, ಡಿಸಿಎಂ ಅಶ್ವತ್ಥ ನಾರಾಯಣ ಮತ್ತು ಸಚಿವ ಸುಧಾಕರ್​ ಅವರನ್ನು ಟ್ಯಾಗ್​ ಕೂಡ ಮಾಡಿದ್ದಾರೆ.

ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ (ಫೆ. 19) ರಥಸಪ್ತಮಿಯಂದು ಬಿಡುಗಡೆಯಾಗಲಿದೆ. ಸ್ವಲ್ಪ ದಿನಗಳ ಹಿಂದೆ ಫೇಸ್​ಬುಕ್​ ಲೈವ್​ನಲ್ಲಿ ಬಂದ ಧ್ರುವ ಸರ್ಜಾ ತಮ್ಮ ಅಭಿಮಾನಿಗಳಿಗೆ ಈ ಗುಡ್ ​ನ್ಯೂಸ್ ಕೊಟ್ಟಿದ್ದರು. ಇಂದು ಧ್ರುವ ಮಾಡಿದ ಟ್ವೀಟ್​ಗೆ ಸ್ಯಾಂಡಲ್​ವುಡ್​ ಕೂಡ ಬೆಂಬಲ ನೀಡಿದೆ.

error: Content is protected !!