ಮಂಡ್ಯ ತಾಲೂಕಿನ ಬಿ.ಹೊಸೂರು ಗ್ರಾಮದ ಹೊರ ಹೊಲಯದಲ್ಲಿ ರುವ ಅಂಬೇಗಾಲು ಕೃಷ್ಣ ದೇವಾಲಯದ ಆವರಣದಲ್ಲಿ ಲಾಕ್‌ಡೌನ್ ನಿಯಮ ಮೀರಿ ಅದ್ದೂರಿ ಮದುವೆ ಕಾರ್ಯಕ್ರಮ.
ಮಂಡ್ಯ ತಹಶಿಲ್ದಾರ್ ದಾಳಿ ಮಾಡಿದಾಗ ಅವರ ಮೇಲೆ ಹಲ್ಲೆ ಯತ್ನ, ಅಸಭ್ಯ ವರ್ತನೆ ಮಾಡಿದ ಘಟನೆ ಜರುಗಿದೆ. ವಧು-ವರನ ಕುಟುಂಬಸ್ಥರಿಂದ ಅಧಿಕಾರಿಗಳ ಮೇಲೆ ಹಲ್ಲೆ ಯತ್ನ ನಡೆದಿದೆ.
ಗ್ರಾಪಂ ಸದಸ್ಯ ಮಹೇಶ್ ಎಂಬುವವರ ಮಗಳ ಮದುವೆ ಕಾರ್ಯಕ್ರಮದಲ್ಲಿ ಸುಮಾರು 300ಕ್ಕೂ ಹೆಚ್ಚು ಜನರು ಪಾಲ್ಗೊಂಡು ಅದ್ದೂರಿ ಮದುವೆ ಮಾಡುತ್ತಿದ್ದರು.
ಯಾವುದೇ ಅನುಮತಿ ಪಡೆಯದೆ ಲಾಕ್‌ಡೌನ್ ನಿಯಮ ಮೀರಿ ಈ ಮದುವೆ ಮಾಡಲಾಗುತ್ತಿತ್ತು.
ವಿಚಾರ ತಿಳಿದು ಅಧಿಕಾರಿಗಳು ದಾಳಿ ಮಾಡಿದರು.
ದಾಳಿ ನೇತೃತ್ವ ವಹಿಸಿದ್ದ ಮಂಡ್ಯ ತಹಶಿಲ್ದಾರ್ ಚಂದ್ರಶೇಖರ್ ಶಂಗಾಳಿ ಮದುವೆ ನಿಲ್ಲಿಸುವಂತೆ ಕುಟುಂಬಸ್ಥರಿಗೆ ಸೂಚನೆ ನೀಡಿದರೂ ಮಾತು ಕೇಳಲಿಲ್ಲ .
ಈ ವೇಳೆ ಅಧಿಕಾರಿಗಳು ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವಾಗ್ವಾದ ನಡುವೆ ತಹಶಿಲ್ದಾರ್ ಚಂದ್ರಶೇಖರ್ ಶಂಗಾಳಿ ಮೇಲೆ ಹಲ್ಲೆ ಯತ್ನವೂ ನಡೆಯಿತು.
ಪೋಲಿಸರು 3 ಕಾರ್‌ಗಳನ್ನು ಸೀಜ್ ಮಾಡಿದ್ದಾರೆ. ಪ್ರಕೃತಿ ವಿಕೋಪ ತಡೆ ಕಾಯ್ದೆ, ಸಾಂಕ್ರಾಮಿಕ ರೋಗಗಳ ಕಾಯ್ದೆ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಕಾಯ್ದೆ ಅಡಿ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ