ಕಾವೇರಿ ನದಿ ಪ್ರವಾಹ : ಕೊಡಗು ಜಿಲ್ಲೆಯ ಹಲವು ರಾಜ್ಯ ಹೆದ್ದಾರಿ ಬಂದ್​​

Team Newsnap
1 Min Read

ಕೊಡಗು : ಕಾವೇರಿ ನದಿ ಪ್ರವಾಹದಿಂದ ಮಡಿಕೇರಿ ತಾಲೂಕಿನ ಹಲವೆಡೆ ಅವಾಂತರ ಸೃಷ್ಟಿಯಾಗಿದ್ದು , ಪ್ರವಾಹದಿಂದ ನಾಪೋಕ್ಲು-ಚೆರಿಯಪರಂಬು, ನಾಪೋಕ್ಲು-ಹೊದವಾಡ-ಬೊಳಿಬಾಣೆ ರಸ್ತೆ ಜಲಾವೃತಗೊಂಡಿದೆ.

ವಿರಾಜಪೇಟೆ ತಾಲೂಕಿನ ಹಾತೂರು ಗ್ರಾಮದ ಬಳಿ ಬೃಹತ್ ಮರ ರಾಜ್ಯ ಹೆದ್ದಾರಿ ಮೇಲೆ ಉರುಳಿ ಬಿದ್ದಿದ್ದು ,ಇದರಿಂದ ವಿರಾಜಪೇಟೆ-ಗೋಣಿಕೊಪ್ಪಲು ರಸ್ತೆ ಸಂಪರ್ಕ ಕಡಿತವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಯಿಂದ ಮರ ತೆರವು ಕಾರ್ಯ ನಡೆಯುತ್ತಿದೆ.

ಅಪಾರ ಮಳೆಯಿಂದ ಜಿಲ್ಲೆಯ ಜಲಾಪಾತಗಳು ಭೋರ್ಗೆದು ದುಮ್ಮುಕ್ಕುತ್ತಿದ್ದು ,ಮುಂಜಾಗೃತಾ ಕ್ರಮವಾಗಿ ಜಿಲ್ಲೆಯ ಯಾವುದೇ ಜಲಪಾತಗಳಿಗೆ ಇಳಿದು ಸ್ನಾನ ಮಾಡುವುದನ್ನ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ಜಿಲ್ಲಾಧಿಕಾರಿ ಡಾ.ವೆಂಕಟ್​ ರಾಜಾ ಜಲಪಾತ ,ನದಿ-ತೊರೆಗಳು, ಝರಿಗಳು, ಸಾರ್ವಜನಿಕ ಕೆರೆಗಳಲ್ಲೂ ಸ್ನಾನ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

Share This Article
Leave a comment