December 24, 2024

Newsnap Kannada

The World at your finger tips!

d7ac6688 098c 45f6 9d4e 25acf3a7ea77

ಮಂತ್ರಾಲಯದಲ್ಲಿ 12 ವರ್ಷಕ್ಕೊಮ್ಮೆ ತುಂಗಭದ್ರಾ ಪುಷ್ಕರ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ

Spread the love

ಈ ವರ್ಷ ನವೆಂಬರ್ 20 ರಿಂದ ಡಿಸೆಂಬರ್ 1 ರವರೆಗೆ ತುಂಗಭದ್ರಾ ಪುಷ್ಕರ ನಡೆಯಲಿದೆ.

ಪ್ರತಿ 12 ವರ್ಷಕ್ಕೊಮ್ಮೆ ಕೃಷ್ಣೆ ಹಾಗೂ ಕೃಷ್ಣಾ ನದಿಯ ಪುಷ್ಕರ ಕಾರ್ಯಕ್ರಮ ನಡೆಯುತ್ತದೆ. ಕೃಷ್ಣಾ ನದಿ ಹಾಗೂ ತುಂಗಭದ್ರಾ ನದಿಯ ಪುಷ್ಕರಗಳು ಬೇರೆ ಬೇರೆ ವರ್ಷ ನಡೆಯುತ್ತವೆ. ಈ ವರ್ಷ ತುಂಗಭದ್ರಾ ನದಿಯ ಪುಷ್ಕರ ನಡೆಯಲಿದೆ.

ಜೀವನದಿಯಾದ ತುಂಗಭದ್ರಾ ನದಿಯು ಹಲವರಿಗೆ ಜೀವನವನ್ನು ನೀಡಿದೆ. ಈ ನದಿಯನ್ನೇ ನಂಬಿಕೊಂಡ ಕೋಟ್ಯಾಂತರ ಜನರಿದ್ದಾರೆ. ತುಂಗಭದ್ರಾ ನದಿಯನ್ನು ಪೂಜಿಸುವ ವಿಶೇಷ ಕಾರ್ಯಕ್ರಮವಾದ ಪುಷ್ಕರ ಎಂಬ ಆಚರಣೆ ತೆಲುಗು ಭಾಷಿಗರು ಆಚರಿಸುತ್ತಾರೆ.

12 ವರ್ಷಕ್ಕೊಮ್ಮೆ ನದಿಯ ದಡದಲ್ಲಿ ಪುಣ್ಯ ಸ್ನಾನ ಮಾಡಿ ನದಿಯನ್ನು ಪೂಜಿಸುತ್ತಾರೆ. ಈ ಪದ್ದತಿ ಹಿಂದಿನ‌ ತಲೆಮಾರಿನಿಂದಲೂ ನಡೆದುಕೊಂಡು ಬಂದಿದೆ ಎಂದು ಮಂತ್ರಾಲಯದ ಶ್ರೀ ಸುಭುದೇಂದ್ರ ತೀರ್ಥರು ಮಾಹಿತಿ ನೀಡಿದ್ದಾರೆ.

ಆಂಧ್ರ ಪ್ರದೇಶ ಸರಕಾರ ಪುಷ್ಕರಕ್ಕೆ 200ಕೋಟಿ ರೂಪಾಯಿ ಅನುದಾನ ನೀಡಲಿದೆ.

ಈ ವರ್ಷ ಕೊರೋನಾ ಇರುವ ಹಿನ್ನೆಲೆಯಲ್ಲಿ ಪುಷ್ಕರವನ್ನು ಎಚ್ಚರಿಕೆಯಿಂದ ಮಾಡಲಾಗುತ್ತಿದೆ. ಕೊರೋನಾ ನಿಯಮಾವಳಿಗಳನ್ನು ಪಾಲಿಸಿಕೊಂಡು ಪುಷ್ಕರ ಆಚರಿಸಲಾಗುವುದು,

ಪುಷ್ಕರದಲ್ಲಿ 60 ವರ್ಷ ಮೇಲ್ಪಟ್ಟವರು, 12 ವರ್ಷದೊಳಗಿನವರಿಗೆ ಅವಕಾಶವಿಲ್ಲ. ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡಲಾಗುವುದು, ಪುಷ್ಕರ ಸಂದರ್ಭದಲ್ಲಿ ಪುಣ್ಯ ಸ್ನಾನಕ್ಕೆ ಸರದಿಯಂತೆ ಒಬ್ಬೊಬ್ಬರನ್ನೇ ಬಿಡಲಾಗುವುದು.

ಪುಷ್ಕರದಲ್ಲಿ ಪಾಲ್ಗೊಳ್ಳುವವರು ಕರ್ನೂಲ ಜಿಲ್ಲಾಡಳಿತ ನೀಡುವ ಇ- ಪಾಸ್ ಪಡೆಯಬೇಕಾಗಿದೆ ಎಂದು ತಿಳಿಸಿದ್ದಾರೆ.

ಪುಷ್ಕರಕ್ಕೆ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಆಹ್ವಾನಿಸಲಾಗಿದೆ. ಕೇಂದ್ರದ ಹಲವಾರು ಸಚಿವರು ಸಹ ಭಾಗಿಯಾಗಲಿದ್ದಾರೆ ಎಂದು ಮಂತ್ರಾಲಯದ ಶ್ರೀಗಳು ತಿಳಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!