ನವದೆಹಲಿ : ನಿನ್ನೆ ಭಾರಿ ಭದ್ರತಾ ಲೋಪ ಘಟನೆ ಲೋಕಸಭೆಯಲ್ಲಿ ನಡೆದ ಬಳಿಕ , ಆರೋಪಿಗಳ ಕುರಿತು ಮಾಹಿತಿ ಒಂದೊಂದಾಗಿ ಹೊರಬರುತ್ತಿದೆ .
ಆರೋಪಿ ಮನೋರಂಜನ್ ಮೈಸೂರಿನ ಸಂಸದ ಪ್ರತಾಪ್ ಸಿಂಹ ಕಚೇರಿಗೆ ಆಗಾಗ ಭೇಟಿ ನೀಡುತ್ತಿದ್ದ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ .
ಹೊಸ ಸಂಸತ್ ಭವನವನ್ನು ನೋಡಬೇಕೆಂಬ ಮನವಿ ಮೇರೆಗೆ ,ಆರೋಪಿ ಮನೋರಂಜನ್ ಮತ್ತು ಸ್ನೇಹಿತ ಆರೋಪಿ ಸಾಗರ್ ಶರ್ಮಾನನ್ನು ಸಂಸದರ ಕಚೇರಿಗೆ ಪರಿಚಯಿಸಿದ್ದ ಅವರಿಗೆ ಪಾಸ್‌ಗಳನ್ನು ನೀಡಲಾಗಿತ್ತು ಎಂದು ಮೂಲಗಳಿಂದ ತಿಳಿದುಬಂದಿದೆ.
ಒಟ್ಟಾರೆ 3 ಪಾಸ್‌ಗಳನ್ನು ವಿತರಿಸಲಾಗಿದ್ದು , ಮೂರನೇ ಪಾಸ್ ಪಡೆದಿದ್ದ ಮಹಿಳೆ ಮಗುವಿನ ಜೊತೆ ಬಂದಿದ್ದರಿಂದ ಮಗುವಿನ ಹೆಸರು ನಮೂದಿಸದ ಕಾರಣ ಪ್ರವೇಶ ಸಿಗದೆ ಹಿಂದಿರುಗಿದರು .ಲೋಕಸಭಾ ಭದ್ರತಾ ಲೋಪ – 8 ಭದ್ರತಾ ಸಿಬ್ಬಂದಿ ಅಮಾನತು
ಸಂಸತ್ ಪ್ರವೇಶದ ಪಾಸ್‌ಗಾಗಿ ಸಂಸದ ಪ್ರತಾಪ್ ಸಿಂಹ ಮತ್ತು ಅವರ ಕಚೇರಿಗೆ ಮನೋರಂಜನ್ ಮೂರು ತಿಂಗಳಿನಿಂದ ದುಂಬಾಲು ಬಿದ್ದಿದ್ದ ಎಂದು ಬೆಳಕಿಗೆ ಬಂದಿದೆ.
More Stories
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ