January 28, 2026

Newsnap Kannada

The World at your finger tips!

manmul

ಮನ್ಮುಲ್ ಫಲಿತಾಂಶ: ಕಾಂಗ್ರೆಸ್ ಅಧಿಕಾರಕ್ಕೆ ; 3 ತಾಲೂಕುಗಳ ಫಲಿತಾಂಶಕ್ಕೆ ತಡೆ

Spread the love

ಮಂಡ್ಯ : ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಮತದಾನದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಜಯಗಳಿಸಿದ್ದಾರೆ . ಮನ್ಮುಲ್ ನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಲಿದೆ.

ಮಂಡ್ಯ ಮೈಷುಗರ್ ಶಾಲೆಯಲ್ಲಿ ಚುನಾವಣೆ ನಡೆಯಿತು, ನಂತರ ನಡೆದ ಮತ ಏಣಿಕೆ ಮಾಡಿದರೂ ಆದರೆ ಫಲಿತಾಂಶ ಪ್ರಶ್ನಿಸಿ ಅಭ್ಯರ್ಥಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಕೆ.ಆರ್.ಪೇಟೆ, ಮಳವಳ್ಳಿ ಹಾಗೂ ಮದ್ದೂರು ತಾಲ್ಲೂಕುಗಳ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.

ಚುನಾವಣೆಯಲ್ಲಿ ಯಾರಿಗೆ ಗೆಲುವು ?

ಮಂಡ್ಯ ತಾಲೂಕಿನಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಜೆಡಿಎಸ್ ಬೆಂಬಲಿತರಾದ ಬಿ.ಆರ್. ರಾಮಚಂದ್ರ – 149 ಮತಗಳು,

ಎಂ. ಎಸ್.ರಘುನಂದನ್ – 143 ಹಾಗೂ ಕಾಂಗ್ರೆಸ್ ಬೆಂಬಲಿತರಾದ ಯು.ಸಿ.ಶಿವಕುಮಾರ್ –136 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದರು. ಕೆ. ರಾಜು (ಕೆಬ್ಬಹಳ್ಳಿ) – 61, ವಿಜಯಕುಮಾರ್- 65 ಮತಗಳನ್ನು ಪಡೆದು ಪರಾಭವಗೊಂಡರು.

ಶ್ರೀರಂಗಪಟ್ಟಣ :

ಕಾಂಗ್ರೆಸ್ ಬೆಂಬಲಿತ ಬಿ.ಬೋರೇಗೌಡ – 61 ಮತಗಳನ್ನು ಪಡೆದು ಜಯಗಳಿಸಿದರೆ, ಎಂ ಕಿಶೋರ್(ಕಿರಣ್)-1, ಪುಟ್ಟಸ್ವಾಮಿಗೌಡ- 5 ಮತಗಳನ್ನು ಪಡೆದು ಪರಾಭವಗೊಂಡರು.

ಪಾಂಡವಪುರ :

ಜೆಡಿಎಸ್ ಬೆಂಬಲಿತ ಶಿವಕುಮಾರ್ – 98 ಮತಗಳನ್ನು ಪಡೆದು ಜಯಗಳಿಸಿದ್ದಾರೆ

ಕಾಡೇನಹಳ್ಳಿ ರಾಮಚಂದ್ರ –25 ಮತಗಳನ್ನು ಪಡೆದು ಸೋತರು

ನಾಗಮಂಗಲ :

ಕಾಂಗ್ರೆಸ್ ಬೆಂಬಲಿತರಾದ ಅಪ್ಪಾಜಿಗೌಡ –170 ಮತಗಳು, ಲಕ್ಷ್ಮಿನಾರಾಯಣ – 133 ಮತಗಳನ್ನು ಪಡೆದು ಜಯಭೇರಿ ಬಾರಿಸಿದರು. ದೇವೇಗೌಡ – 73, ಹಾಗೂ ನೆಲ್ಲಿಗೆರೆ ಬಾಲು- 76 ಮತಗಳನ್ನು ಪಡೆದು ಪರಾಭವಗೊಂಡರು.

ಕೆ.ಆರ್.ಪೇಟೆ :

ಚುನಾವಣೆಗೆ ಸ್ಪರ್ಧೆ ಮಾಡಿದ್ದ ಡಾಲು ರವಿ, ಮದ್ದೂರು ತಾಲೂಕಿನಿಂದ ಸ್ಪರ್ಧೆ ಮಾಡಿದ್ದ ಎಸ್.ಪಿ.ಸ್ವಾಮಿ, ಎಂ. ಕೆ.ಹರೀಶ್ ಬಾಬು.ಇದನ್ನು ಓದಿ -ಮಂಡ್ಯ: ಬಾಲಕಿಗೆ ಕೇಕ್‌ ನೀಡಿದ ಕಾಮುಕರು ಚಾಕು ಬೆದರಿಕೆ ಹಾಕಿ ಗ್ಯಾಂಗ್‌ ರೇಪ್‌

ಮಳವಳ್ಳಿ :

ಡಿ. ಕೃಷ್ಣೇಗೌಡ ಅವರನ್ನು ಅಭಿಮಾನಿಗಳು ಎತ್ತಿಕೊಂಡು ಕುಣಿದು ಸಂಭ್ರಮಿಸಿದರು.

error: Content is protected !!