December 22, 2024

Newsnap Kannada

The World at your finger tips!

Mandya manmul (nandini) Fire incident

ಮನ್ ಮುಲ್ ಬೆಂಕಿ ದುರಂತ – ತುಪ್ಪ , ಕೋವಾ ಘಟಕಕ್ಕೆ ಭಾರಿ ನಷ್ಟ

Spread the love

ಮದ್ದೂರು: ಮನ್ ಮುಲ್ ಮೆಗಾ ಡೈರಿಯಲ್ಲಿ ಅಗ್ನಿ ದುರಂತ ಭಾನುವಾರ ಬೆಳಿಗ್ಗೆ ಸಂಭವಿಸಿದೆ.

ಮದ್ದೂರಿನ ಗೆಜ್ಜಲಗೆರೆ ಬಳಿ ಇರುವ ಮೆಗಾ ಡೈರಿ ಮೊದಲ ಅಂತಸ್ತಿನ ತುಪ್ಪ ಮತ್ತು ಕೋವಾ ಘಟಕದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ದುರಂತ ಸಂಭವಿಸಿದೆ.

ಘಟಕದಲ್ಲಿ ಬೆಂಕಿ ಕಂಡ ಕೂಡಲೇ ನೌಕರರು ನಂದಿಸುವ ಪ್ರಯತ್ನ ಮಾಡಿದರು ಆದರೆ ಬೆಂಕಿಯ ಕೆನ್ನಾಲಿಗೆ ವೇಗವಾಗಿ ಆವರಿಸಿದೆ ಬಾಯ್ಲರ್ ಗಳು ಸ್ಪೋಟಗೊಂಡಿರುವ ಸಾಧ್ಯತೆ ಹೆಚ್ಚಾಗಿದೆ. ಇದನ್ನು ಓದು – ಮಕ್ಕಳ ಬಾಲ್ಯ ಕಸಿಯುತ್ತಿದ್ದೇವೆಯೇ??

ಮೆಗಾ ಡೈರಿ ಕಟ್ಟಡದಲ್ಲಿ ಬೆಂಕಿ ಧಗ ಧಗಿಸಿ ಹೊತ್ತಿ ಉರಿದಿದ್ದು ಇದರಿಂದ ಮನ್ ಮುಲ್ ಆವರಣದಲ್ಲಿ ದಟ್ಟ ಹೊಗೆಆವರಿಸಿದೆ ಬೆಂಕಿ ನಂದಿಸಲು ಸ್ಥಳೀಯ ನೌಕರರು, ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ

ಮನ್ ಮುಲ್ ಬೆಂಕಿ ದುರಂತ – ತುಪ್ಪ , ಕೋವಾ ಘಟಕಕ್ಕೆ ಭಾರಿ ನಷ್ಟ – ManMul Fire Tragedy – Heavy loss to Ghee, Kova unit #manmul #mandya #karnataka

Copyright © All rights reserved Newsnap | Newsever by AF themes.
error: Content is protected !!