February 23, 2026

Newsnap Kannada

The World at your finger tips!

santraste

ಸಿಡಿ ಸಂತ್ರಸ್ತ ಯುವತಿ ಪರ ವಕೀಲ ಮಂಜುನಾಥ್ ಬಾರ್ ಕೌನ್ಸಿಲ್ ನಿಂದ‌ ಅಮಾನತ್ತು

Spread the love

ಫೇಸ್​ಬುಕ್​​ ಲೈವ್​​ನಲ್ಲಿ ಕರ್ನಾಟಕ ಬಾರ್ ಕೌನ್ಸಿಲ್ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪದ ಮೇಲೆ ಸಿಡಿ ಪ್ರಕರಣ ಸಂತ್ರಸ್ತೆ ಯುವತಿ ಪರ ವಕೀಲ ಮಂಜುನಾಥ್ ಆರ್.​ ಅವರನ್ನು ಬಾರ್ ಕೌನ್ಸಿಲ್ ನಿಂದ ಅಮಾನತ್ತು ಮಾಡಲಾಗಿದೆ.

ವಕೀಲ ಮಂಜುನಾಥ್ ಆರ್. ಬಾರ್​ ಕೌನ್ಸಿಲ್ ವಿರುದ್ಧ ಹಣ ದುರ್ಬಳಕೆ ಆರೋಪ ಮಾಡಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ 10 ದಿನಗಳಲ್ಲಿ ಉತ್ತರ ನೀಡಲು ಕರ್ನಾಟಕ ಬಾರ್ ಕೌನ್ಸಿಲ್ ಮಂಜುನಾಥ್​ಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೇ ಅವರನ್ನು ವಿಚಾರಣೆ ಮುಕ್ತಾಯದ ತನಕ ಅಮಾನತ್ತು ಮಾಡಿ ಆದೇಶ ಹೊರಡಿಸಿದೆ.

ದಾಖಲೆ ಪ್ರಕಾರ ಮಂಜುನಾಥ್ ಯುವತಿಗೆ ವಕಾಲತ್ತು ಸಹಿ ಹಾಕಿದ್ದ ವಕೀಲರಾಗಿದ್ದಾರೆ. ಇನ್ನೂ ಜಗದೀಶ್ ಇವರ ಅರ್ಜಿಯಲ್ಲಿ ತಾನೇ ಯುವತಿ ಪರ ವಕೀಲ ಅಂತಾ ಹೇಳಿದ್ದರು. ಫೇಸ್​​ಬುಕ್​​ ಲೈವ್​​ನಲ್ಲಿ ವಕೀಲ ಮಂಜುನಾಥ್ ಅವರು ಬಾರ್​ ಕೌನ್ಸಿಲ್​​ನಲ್ಲಿ ಅನುದಾನಗಳ ದುರ್ಬಳಕೆಯಾಗಿದೆ ಎಂದು ಆರೋಪಿಸಿದ್ದರು.

ಈ ಆರೋಪದಿಂದ ಕೌನ್ಸಿಲ್​ ವಿಶ್ವಾಸಾರ್ಹತೆಗೆ ಧಕ್ಕೆಯಾಗಿದೆ. ಅಲ್ಲದೇ ಫೇಕ್​ ಸ್ಟಾಂಪ್ಸ್​​ ಬಗ್ಗೆಯೂ ಆರೋಪ ಮಾಡಿ ತೆಲಗಿ ಚಾಪಾ ಕಾಗದ ಪ್ರಕರಣಕ್ಕೆ ಹೋಲಿಕೆ ಮಾಡಿದ್ದಾರೆ. ಇದರಿಂದ ರಾಜ್ಯದ ಎಲ್ಲಾ ವಕೀಲರು ಕೌನ್ಸಿಲ್​​ಗೆ ಕರೆ ಮಾಡುತ್ತಿದ್ದಾರೆ ಎಂದು ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ.

error: Content is protected !!