December 25, 2024

Newsnap Kannada

The World at your finger tips!

accident

ಮದ್ದೂರಲ್ಲಿ ಮಾವಿನ ಕಾಯಿ ಸಾಗಿಸುತ್ತಿದ್ದ ಲಾರಿ ಪಲ್ಟಿ: ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾದ ಮಾವಿನಕಾಯಿ

Spread the love

ಮಾವಿನಕಾಯಿಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಮದ್ದೂರು ಪಟ್ಟಣದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುರಸಭೆ ಕಚೇರಿ ಬಳಿ ಪಲ್ಟಿಯಾಗಿದೆ.

ಮೈಸೂರಿನ ಎಪಿಎಂಸಿ ಮಾರುಕಟ್ಟೆಯಿಂದ ಬುಧವಾರ ಮಾವಿನಕಾಯಿ ಲೋಡ್​ ಮಾಡಿಕೊಂಡು ಆಂಧ್ರಪ್ರದೇಶದ ಚಿತ್ತೂರಿಗೆ ಲಾರಿ ಹೋಗುತ್ತಿತ್ತು.

ಇದನ್ನು ಓದಿ : ಸಪ್ತಪದಿ ತುಳಿದು ಪರೀಕ್ಷೆ ಬರೆದ ಮಧುಮಗಳು! ಮಾದರಿಯಾದ STG ಕಾಲೇಜ್ ವಿದ್ಯಾರ್ಥಿನಿ

ಮಾರ್ಗಮಧ್ಯೆ ಮದ್ದೂರಲ್ಲಿ ಕಾರನ್ನು ಹಿಂದಿಕ್ಕುವ ಭರದಲ್ಲಿ ಹೋದ ಲಾರಿ ನಿಯಂತ್ರಣ ತಪ್ಪಿ ರಸ್ತೆಬದಿಗೆ ಪಲ್ಟಿಯಾಗಿದೆ. ರಸ್ತೆಬದಿ ಮಾವಿನ ಕಾಯಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಚಾಲಕ ಮತ್ತು ಕ್ಲೀನರ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಮದ್ದೂರು ಸಂಚಾರಿ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದರು. ಸಂಚಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Mandya news update
  • Mandya news
  • Mandya
  • maddur, pandavapura

Copyright © All rights reserved Newsnap | Newsever by AF themes.
error: Content is protected !!