ಬೆಳಗಾವಿಯಲ್ಲಿ ನಡೆಯುವ ಲೋಕಸಭಾ ಉಪ ಚುಣಾವಣೆಯಲ್ಲಿ ಮಂಗಳಾ ಸುರೇಶ್ ಕುಮಾರ್ ಅವರೇ ಗೆಲ್ಲಲಿದ್ದಾರೆ ಎಂದು ಸಚಿವ ರಮೇಶ ಜಾರಕಿಹೊಳೆ ಮಾಧ್ಯಮ ಮಿತ್ರರಿಗೆ ಮಾಹಿತಿ ನೀಡಿದರು.
ಬೆಳಗಾವಿಯಿಂದ ಸಂಸದ ಸ್ಥಾನಕ್ಕೆ ಆಯ್ಕೆಯಾಗಿದ್ದ ಸುರೇಶ ಅಂಗಡಿಯವರು ಅನಾರೋಗ್ಯದ ನಿಮಿತ್ತ ಕೆಲ ವಾರಗಳ ಹಿಂದೆ ನಿಧನರಾಗಿದ್ದರು. ಹಾಗಾಗಿ ತೆರವಾಗಿದ್ದ ಸಂಸದ ಸ್ಥಾನಕ್ಕೆ ಉಪ ಚುಣಾವಣೆ ನಡೆಸಲು ತೀರ್ಮಾನಿಸಲಾಗುವುದು. ಸಂಸದ ಸ್ಥಾನದ ಅನೇಕ ಆಕಾಂಕ್ಷಿಗಳು ತಮಗೇ ಪಕ್ಷದಿಂದ ಟಿಕೇಟ್ ಸಿಗುತ್ತದೆ ಎಂದು ಕಾದು ಕುಳಿತಿದ್ದರು. ಈಗ ಸಚಿವ ಜಾರಕಿಹೊಳಿ ಬೆಳಗಾವಿಯ ಲೋಕಸಭಾ ಉಪಚುಣಾವಣೆಯ ಅಭ್ಯರ್ಥಿ ದಿವಂಗತ ಸುರೇಶ ಅಂಗಡಿಯವರ ಪತ್ನಿ ಮಂಗಳ ಸುರೇಶ ಅಂಗಡಿ ಎಂಬ ಹೇಳಿಕೆ ನಿರಾಳತೆಯ ಜೊತೆ ಟಿಕೇಟ್ ಆಕಾಂಕ್ಷಿಗಳ ನಿರಾಸೆಗೂ ಕಾರಣವಾಗಿದೆ.
‘ಮುಂದಿನ ಸಂಸದೆ ಮಂಗಳಾ ಅವರೇ’ ಎಂದು ಹೇಳಿರುವ ರಮೇಶ ಅವರು, ಬಿಜೆಪಿ ಪಕ್ಷ ಈ ಹಿಂದೆ ಸುಷ್ಮಾ ಸ್ವರಾಜ್ ಹಾಗೂ ತೇಜಸ್ವಿನಿ ಅನಂತ ಕುಮಾರ್ ಅವರ ವಿಷಯದಲ್ಲಿ ಪ್ರಯೋಗಿಸಿದ ತಂತ್ರವನ್ನೇ ಮತ್ತೊಮ್ಮೆ ಪ್ರಯೋಗ ಮಾಡುತ್ತಿದೆ.
ಭಾನುವಾರ ಕೆಲ ಟ್ರೋಲ್‌ಪೇಜ್‌ಗಳು ರಮೇಶ್ ಜಾರಕಿಹೊಳಿಯವರ ಪುತ್ರ ಅಮರನಾಥ್ ಅವರೇ ಮುಂದಿನ ಸಂಸದ ಎಂದು ಟ್ರೋಲ್ ಮಾಡಿದ್ದವು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಮೇಶ್ ‘ನನ್ನ ಮಗ ಈಗ ಇನ್ನೂ ಚಿಕ್ಕವನು. ಅವನು ರಾಜಕಾರಣದಲ್ಲಿ ಇನ್ನೂ ಪಳಗಬೇಕು. ಈಗ ಅವನು ಕರ್ನಾಟಕ ಹಾಲು ಒಕ್ಕೂಟ ಮಂಡಳಿಯಲ್ಲಿ ಸದಸ್ಯನಾಗಿದ್ದಾನೆ. ಮೊದಲು ಆತ ಜನರೊಂದಿಗೆ ಬೆರೆಯಲಿ. ಚುಣಾವಣೆಯಲ್ಲಿ ಗೆಲ್ಲುವ ಅರ್ಹತೆ ಗಳಿಸಿಕೊಳ್ಳಲಿ. ಉಳಿದ ವಿಷಯ ಮುಂದೆ ನೋಡೋಣ’ ಎಂದು ಹೇಳಿದರು.
More Stories
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು