January 11, 2025

Newsnap Kannada

The World at your finger tips!

mangala

ಕಣ್ಣೀರು ಹಾಕಿ ಮತಯಾಚಿಸಿದ ಮಂಗಳ ಅಂಗಡಿ

Spread the love

ಬೆಳಗಾವಿ ಲೋಕಸಭಾ ಉಪ ಚುನಾವಣೆಯ. ಕಾವು ಏರುತ್ತಿದೆ.

ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಬೆಳಗಾವಿಯ ಸಾಲಹಳ್ಳಿ ಗ್ರಾಮದ ಪ್ರಚಾರ ಕಾರ್ಯಕ್ರಮದಲ್ಲಿ ಬುಧವಾರ ಭಾಷಣ ಮಾಡಿ ತಮ್ಮ ಪತಿ ದಿ. ಸುರೇಶ್​ ಅಂಗಡಿಯವರನ್ನ ನೆನೆದು ಕಣ್ಣೀರು ಹಾಕಿದರು.

ಪತಿಯನ್ನು ನೆನೆದು ಭಾವುಕರಾದ ಮಂಗಳಾ, ರೈಲ್ವೆ ಸಚಿವರಾದ ಬಳಿಕ ನನ್ನ ಪತಿ ಒಂದೇ ಒಂದು ಕ್ಷಣ ಮನೆಯಲ್ಲಿ ಕೂರಲಿಲ್ಲ. ಕ್ಷೇತ್ರದ ಸರ್ವತೋಮುಖ ಅಭಿವೃದ್ದಿ ಸಾಧಿಸುವ ಛಲ ತೊಟ್ಟು ಕೊರೊನಾ ನಡುವೆಯೂ ಜನೋಪಕಾರಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಕೊರೊನಾ ಅವರನ್ನೇ ಬಲಿ ತೆಗೆದುಕೊಂಡಿತು ಎಂದು ಹೇಳಿ ಕಣ್ಣೀರಿಟ್ಟರು.

ಪತಿಯ ಅಭಿವೃದ್ಧಿ ಕೆಲಸಗಳನ್ನು ಮುಂದುವರೆಸಲು ಅನಿವಾರ್ಯವಾಗಿ ನಾನು ಬರಬೇಕಾಗಿದೆ. ನಮ್ಮ ಯಜಮಾನರಿಗೆ ಕೊಟ್ಟ ಆಶೀರ್ವಾದವನ್ನು ನನಗೂ ನೀಡಿ ಎಂದು ಮಂಗಳ ಮತಯಾಚಿಸಿದರು.

Copyright © All rights reserved Newsnap | Newsever by AF themes.
error: Content is protected !!