ಎಟಿಎಂಗೆ ತುಂಬುವ 65 ಲಕ್ಷ ರು ಹಣವನ್ನು ಕದ್ದು ಪರಾರಿಯಾಗಿದ್ದ ಮಂಡ್ಯ ಮೂಲದ ಚಾಲಕ ಯೋಗೇಶ್ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ಫೆ. 3ರಂದು ಎಟಿಎಂ ಹಣ ಕದ್ದು ಅತ್ತೆ ಮಗಳೊಂದಿಗೆ ಎಸ್ಕೇಪ್ ಆಗಿದ್ದ ಯೋಗೇಶ್ ಕೊನೆಗೂ ಸಿಕ್ಕಿಬಿದ್ದಿದ್ದಾನೆ.
ಸೆಕ್ಯೂರ್ ವ್ಯಾಲ್ಯೂ ಏಜೆನ್ಸಿಯಲ್ಲಿ ಚಾಲಕನಾಗಿದ್ದ ಆಗಿದ್ದ ಆರೋಪಿ ಯೋಗೇಶ್ ಎಟಿಎಂಗೆ ತುಂಬಿಸಬೇಕಿದ್ದ 65 ಲಕ್ಷ ರೂ. ಹಣ ಕದ್ದು ಪರಾರಿ ಯಾಗಿದ್ದನು.
ಹಣ ಕದ್ದು ಆಶ್ರಯಕ್ಕಾಗಿ ಸ್ನೇಹಿತರನ್ನು ಸಂಪರ್ಕಿಸಿದ್ದ ಆರೋಪಿ ಯೋಗೇಶ್ ಆತನ ಮನೆಯಲ್ಲೇ ಉಳಿದುಕೊಂಡಿದ್ದ. ಯೋಗೇಶ್ನ ಕಾಲ್ ಟ್ರ್ಯಾಕ್ ಪತ್ತೆ ಮಾಡಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಹೆಂಡತಿ, ಮಕ್ಕಳಿದ್ದರೂ ಅತ್ತೆ ಮಗಳ ಜೊತೆ ಹಣದೊಂದಿಗೆ ಎಸ್ಕೇಪ್ ಆಗಿ ಮೈಸೂರಿನಲ್ಲಿ ಸ್ನೇಹಿತರ ಜೊತೆ ಸಂಪರ್ಕದಲ್ಲಿದ್ದಾಗ ಬಲೆಗೆ ಬಿದ್ದ ಆರೋಪಿ ಯೋಗೇಶ್ನನ್ನು ಬಂಧಿಸಲಾಗಿದೆ.
ಆತನ ಬಂಧನದ ಬಳಿಕ ಎಟಿಎಂಗೆ ತುಂಬುವ 65 ಲಕ್ಷ ರು ಕದ್ದ ಹಣದಲ್ಲಿ ಆತನ ಬಳಿ ಕೇವಲ 15 ಸಾವಿರ ರು ಮಾತ್ರ ಇತ್ತು. ಉಳಿದ ಹಣವೆಲ್ಲಿ ಎಂದು ಬಾಯಿ ಬಿಡದೆ ಸತಾಯಿಸುತ್ತಿದ್ದಾನೆಂದು ಹೇಳಲಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು