ಶ್ರೀರಂಗಪಟ್ಟಣ: ಮಂಡ್ಯದ ರಾಜಕಾರಣದಲ್ಲಿ ಈಗ ಹೊಸ ಪರ್ವ ಆರಂಭವಾಗಿದೆ. ಮಂಡ್ಯ ಲೋಕಸಭಾ ಕ಼್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಎಚ್ ಡಿ ಕುಮಾರಸ್ವಾಮಿ ಅವರು ಈ ಬಾರಿ ಚುನಾವಣೆಯಲ್ಲಿ ಹೆಚ್ಚಿನ ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಮುಖಂಡ ಎಸ್ ಜೆ ಆನಂದ್ ಭರವಸೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಆನಂದ್ , ಮಂಡ್ಯದಲ್ಲಿ ಬಿಜೆಪಿ ಬಲ ಹಾಗೂ ಜೆಡಿಎಸ್ ಕ್ಷೇತ್ರದಲ್ಲಿ ಭದ್ರ ಕೋಟೆ ಎಂದು ಖ್ಯಾತಿಯಾಗಿರುವ ಕಾರಣಕ್ಕೆ ಕುಮಾರಣ್ಣನ ಗೆಲುವು ಸುಲಭವಾಗಲಿದೆ ಎಂದಿದ್ದಾರೆ.
ಜಿಲ್ಲೆಯ ಜನಕ್ಕೆ ಕುಮಾರಸ್ವಾಮಿ ಅವರ ಬಗ್ಗೆ ವಿಶೇಷ ಪ್ರೀತಿ, ಅಭಿಮಾನವಿದೆ. ಬೆಂಗಳೂರಿನಲ್ಲಿ ಮಾ 30 ರಂದು ಸಂಸದೆ ಸುಮಲತಾ ಮಹತ್ವದ ಸಭೆ
ಇದು ಅವರಿಗೆ ವರದಾನವಾಗಲಿದೆ. ಬಿಜೆಪಿ ಕಾರ್ಯಕರ್ತರು ಮೋದಿ ಅವರನ್ನು ಮೂರನೇ ಅವಧಿಗೆ ಪ್ರಧಾನಿ ಮಾಡಲು ಪಣ ತೊಟ್ಟಿರುವುದರಿಂದ ಒಗ್ಗಟ್ಟಿನಿಂದ ಕೆಲಸ ಮಾಡಿ ಕುಮಾರಣ್ಣನ್ನನ್ನು ಭಾರಿ ಬಹುತದಿಂದ ಗೆಲ್ಲಿಸಬೇಕಾಗಿದೆ ಎಂದು ಆನಂದ್ ಹೇಳಿದ್ದಾರೆ
More Stories
ಮಳೆ ನಿಂತರು ಮರದ ಹನಿ ನಿಲ್ಲದು
ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಜನರ ಮೃತದೇಹ ಪತ್ತೆ
ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ