November 10, 2024

Newsnap Kannada

The World at your finger tips!

sumaltha ambareesh

ಎಂಪಿ ಫಂಡ್ ಇಲ್ಲ : ಸ್ವಂತ ದುಡ್ಡಿನಲ್ಲಿ ಜಿಲ್ಲೆಗೆ ನಿತ್ಯ 2 ಸಾವಿರ ಲೀ. ಆಮ್ಲಜನಕ ಖರೀದಿ – ಸಂಸದೆ ಸುಮಲತಾ ‌

Spread the love

ಮಂಡ್ಯ ಜಿಲ್ಲೆಯಲ್ಲೂ ಆಮ್ಲಜನಕದ ಕೊರತೆ ನೀಗಲು ಕೊರೋನಾ ಸೋಂಕಿತ ಗಾಗಿ ಪ್ರತಿನಿತ್ಯ ಸ್ವಂತ ಹಣದಲ್ಲಿ 2000 ಲೀಟರ್ ಅ್ಯಕ್ಸಿಜನ್ ಪ್ರಾಯೋಜನೆ ಮಾಡಲು ಮಂಡ್ಯ ಸಂಸದೆ ಸುಮಲತಾ ನಿರ್ಧಾರ ಮಾಡಿದ್ದಾರೆ.

ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ವಿಷಯ ತಿಳಿಸಿ ಈಗ ಎಂ.ಪಿ ಇಲ್ಲ. ಬೇರೆ ಆರ್ಥಿಕ ಮೂಲಗಳು ನಿಂತು ಹೋಗಿವೆ. ಹೀಗಾಗಿ ನನ್ನ ಸ್ವಂತ ದುಡ್ಡಿನಿಂದ ಪ್ರತಿದಿನ 2,000 ಲೀಟರ್ (2KL ಆಕ್ಸಿಜನ್) ವ್ಯವಸ್ಥೆ ಮಾಡಲು ನಿರ್ಧರಿಸಿದ್ದೇನೆ ಎಂದಿದ್ದಾರೆ.

ಆಕ್ಸಿಜನ್ ಕೊರತೆಯಿಂದ ಯಾವುದೇ ಸಾವು-ನೋವು ಜಿಲ್ಲೆಯಲ್ಲಿ ಸಂಭವಿಸದಂತೆ ಅಧಿಕಾರಿಗಳಿಗೆ ಎಚ್ಚರ ವಹಿಸಲು ಸಭೆಯಲ್ಲಿ ಸೂಚಿಸಿರುವು ದಾಗಿ ಸುಮಲತಾ ಹೇಳಿದ್ದಾರೆ.

kannada.thenewsnap.com

ಸಂಸದೆ ಸಭೆಯಲ್ಲಿ ಸೂಚಿಸಿದ ಪ್ರಮುಖ‌ ಅಂಶಗಳು‌:

  • ಮಂಡ್ಯದ ಜಿಲ್ಲಾಧಿಕಾರಿಗಳ ಜೊತೆಗೆ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಣೆ ಮಾಡುವ ಕುರಿತಾಗಿ ಮಾತುಕತೆ ನಡೆಸಿದೆ. ಇಂದಿನ ಸಭೆಯಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ಮಾಡಲಾಯಿತು.
  • ಜಿಲ್ಲಾಧಿಕಾರಿಗಳು ಮತ್ತು ಡಿಎಚ್ ಓ ಮಂಡ್ಯ ಜಿಲ್ಲೆಗೆ ಪ್ರತಿದಿನ 3KL ಆಕ್ಸಿಜನ್ ಕೊರತೆ ಎದುರಾಗಿದೆ ಎಂದಿದ್ದಾರೆ. ಅದಕ್ಕೆ ಪರಿಹಾರದ ದಾರಿಗಳನ್ನು ಹುಡುಕ ಬೇಕಿದೆ
  • ಆಕ್ಸಿಜನ್ ಸಿಲಿಂಡರ್ ಗಳನ್ನು ತುಂಬಿಸುವುದಕ್ಕೆ ಹಾಸನ, ಮೈಸೂರು, ಹಾಗೂ ರಾಮನಗರಗಳಿಗೆ ಹೋಗಬೇಕಾದ ಪರಿಸ್ಥಿತಿ ಇದೆ ಇದನ್ನು ಸರಿಪಡಿಸಬೇಕಿದೆ.
  • ಮಂಡ್ಯಕ್ಕೆ ತನ್ನದೇ ಆಕ್ಸಿಜನ್ ಘಟಕ ಬೇಕು. ಇದು ಅತ್ಯಂತ ಶೀಘ್ರದಲ್ಲಿ ಸ್ಥಾಪನೆ ಆಗಬೇಕು ಎಂದು ನಿರ್ದೇಶನ ನೀಡಲಾಗಿದೆ.
  • ಜಿಲ್ಲಾಧಿಕಾರಿಗಳಿಗೆ ಆಕ್ಸಿಜನ್ ಘಟಕ ಸ್ಥಾಪನೆಗೆ ಕೊಡಬೇಕಾಗಿರುವ ಸೌಲಭ್ಯಗಳು (liquid tank ಮುಂತಾದವು) ಮತ್ತು ಅನುಮತಿಗಳನ್ನೂ ಅತಿ ಶೀಘ್ರದಲ್ಲಿ ಜಾರಿ ಮಾಡಬೇಕು ಹಾಗೂ ಕೋವಿಡ್ ಮೂರನೇ ಅಲೆ ಬರುವ ಮುಂಚೆ 13KL ಆಕ್ಸಿಜನ್ ಸಾಮರ್ಥ್ಯ ಪಡೆಯುವತ್ತ ಜಿಲ್ಲೆ ಹೆಜ್ಜೆ ಹಾಕಿದೆ.
  • ಕೇಂದ್ರದ National Disaster Response Fund (NDRF) ಮೂಲಕ 10 ಕೋಟಿ ರೂಪಾಯಿಗಳು ಬಿಡುಗಡೆಯಾಗಿದೆ. ಈ ಅನುದಾನವನ್ನು ತಹಶೀಲ್ದಾರ್ ಗಳ ಬೇಡಿಕೆಗೆ ಅನುಗುಣವಾಗಿ ಕೋವಿಡ್ ಅವಶ್ಯಕತೆಗಳಿಗೆ ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳ ಅನುಮತಿ ಕೊಡಿಸಲಾಗಿದೆ.
  • ಜಿಲ್ಲೆಯ ಡಿಸ್ಟ್ರಿಕ್ಟ್ ಮಿನರಲ್ ಫಂಡ್ (ಡಿಎಂಎಫ್) ಖಾತೆಯಲ್ಲಿ Rs.2.5 ಕೋಟಿ ರೂಪಾಯಿಗಳಿವೆ. ಈ ಮೊತ್ತದಲ್ಲಿ ವೈದ್ಯಕೀಯ ಸಲಕರಣೆಗಳು ಮತ್ತು ಉಪಕರಣಗಳನ್ನು ಖರೀದಿಸುವ ಸಾಧ್ಯತೆ ಬಗ್ಗೆ ಮಾನ್ಯ ಉಸ್ತುವಾರಿ ಸಚಿವರ ಜೊತೆ ತಕ್ಷಣ ಚರ್ಚಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
  • ಪೊಲೀಸರಿಗೆ ಹಾಗೂ ಇತರೇ ಕೋವಿಡ್ ವಾರಿಯರ್ಸ್ ಗಳಿಗೆ ವ್ಯಾಕ್ಸಿನ್ ತುರ್ತು ಅಗತ್ಯವಾಗಿದೆ. ಪ್ರತಿಯೊಬ್ಬರಿಗೂ 2 ಡೋಸ್ ವ್ಯಾಕ್ಸಿನ್ ಸಿಗುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ.
  • ಹಳ್ಳಿಗಳಲ್ಲಿ ಮಾಸ್ಕ್ ಧರಿಸುವಿಕೆ, ಸ್ವಚ್ಚತೆ, ಹಾಗೂ ಸಾಮಾಜಿಕ ಅಂತರದ ಬಗ್ಗೆ ಅರಿವು ಮೂಡಿಸಿ ಎಂದು ಜಿ‌.ಪಂ ಸಿ.ಇ.ಒ ಗೆ ಸೂಚಿಸಲಾಗಿದೆ.
  • ಮುಂದೆ ನಸ್೯ ಗಳು, ವೈದ್ಯಕೀಯ ಸಿಬ್ಬಂದಿ ಹಾಗೂ ಡಿ ಗ್ರೂಪ್ ನೌಕರರ ಅವಶ್ಯಕತೆ ಹೆಚ್ಚಾಗುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಸಮರೋಪಾದಿಯಲ್ಲಿ ತುಂಬಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.
  • ಈ ಮುಂಚೆ ಬೆಡ್ ಮ್ಯಾನೇಜ್ಮೆಂಟ್ ಎಂಬ ಕ್ರಿಯಾ ಯೋಜನೆಯಡಿ ಸರ್ಕಾರದಿಂದ ಅನುಮತಿ ಪಡೆದು ಜಿಲ್ಲೆಯ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿಯಲ್ಲಿರುವ ಕೋವಿಡ್ ರೋಗಿಗಳಿಗೆ ಉಚಿತವಾಗಿ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ.

ಲಾಭ ಪಡೆಯುವ ಅವಶ್ಯಕತೆ ನಂಗಿಲ್ಲ:

ಸಂಸದೆಯಾಗಿ ನಾನು ಮಾಡುತ್ತಿರುವುದು ನನ್ನ ಕರ್ತವ್ಯ ಮಾತ್ರ. ಮಾಡುವ ಪ್ರತಿ ಕೆಲಸದಲ್ಲೂ ರಾಜಕೀಯ ಲಾಭ ಪಡೆಯುವ ಅವಶ್ಯಕತೆ ನನಗಿಲ್ಲ. ಕೋವಿಡ್ ನನ್ನು ಕೂಡ ರಾಜಕೀಯ ದಾಳವಾಗಿ ಬಳಸುತ್ತಿರುವವರಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಈ ಸಂದರ್ಭದಲ್ಲಾದರೂ ಪಕ್ಷ, ಜಾತಿ ಎಲ್ಲವನ್ನೂ ಪಕ್ಕಕಿಟ್ಟು ಎಲ್ಲರೂ ಜನರ ರಕ್ಷಣೆಗಾಗಿ ಕೈ ಜೋಡಿಸಲು ಮನವಿ ಮಾಡುತ್ತೇನೆ. ಮಾನವೀಯತೆ ಮೇರೆಯೋಣ.

ಈ ಮಹಾಮಾರಿ ಯಾರಿಗೂ ಪಕ್ಷಪಾತ ಮಾಡದು. ಎಲ್ಲರನ್ನೂ ಸಮನಾಗಿ ಕಾಡುತ್ತಿದೆ. ಎಲ್ಲರೂ ಕೈ ಜೋಡಿಸಿ ಇದನ್ನು ತೊಲಗಿಸೋಣ ಎನ್ನುವುದು ಸಂಸದೆ ಸುಮಲತಾ ಮನವಿಯಾಗಿದೆ.

Join WhatsApp group of Newsnap Kannada https://chat.whatsapp.com/CCR8jY9CI6HGUbm5jWYjSe

Copyright © All rights reserved Newsnap | Newsever by AF themes.
error: Content is protected !!