ಸುಮಲತಾ ಅಂಬರೀಶ್ ನಿಜ ಜೀವನದಲ್ಲಿ ಎಂಪಿ ಆಗಿದ್ದಾರೆ. ಈಗ ಸಿಎಂ ಆಗುವ ಯೋಗ ಅವರಿಗೆ ಒದಗಿ ಬಂದಿದೆ. ಹಾಗಾದರೆ ಯಡಿಯೂರಪ್ಪ ಎಲ್ಲಿ ಹೋದ್ರು ಎನ್ನಬೇಡಿ.
ಆಶ್ಚರ್ಯ ಬೇಡ. ನಿಜ ಜೀವನದಲ್ಲಿ ಮುಖ್ಯಮಂತ್ರಿ ಆಗೋ ಕನಸು ಸುಮಲತಾ ಅವರಿಗೆ ಇದೆಯೋ ಇಲ್ವೋ ಗೊತ್ತಿಲ್ಲ. ಆದ್ರೆ ಮುಖ್ಯಮಂತ್ರಿ ಆಗಿ ಆ ಆಸೆ, ಕನಸನ್ನು ‘‘ಹೋಪ್’’ ಎಂಬ ಸಿನಿಮಾ ಮೂಲಕ ಈಡೇರಿಸಿ ಕೊಂಡಿದ್ದಾರೆ.
‘‘ಹೋಪ್’’ ಅನ್ನೋ ಸಿನಿಮಾ ಮಾಡಿ ಗುರುತಿಸಿಕೊಂಡಿದ್ದ ಅಂಬರೀಶ್.ಎಮ್ ಕಲ್ಪನೆಯಲ್ಲಿ ಮೂಡಿಬಂದಿರುವ ಈ ಸಿನಿಮಾ ಸದ್ದು ಗದ್ದಲ್ಲವಿಲ್ಲದೇ ಸಿನಿಮಾದ ಶೂಟಿಂಗ್ ಮಾಡಿದೆ.
ಸಂಸದರ ಕೆಲಸದ ನಡುವೆಯೂ
ಸುಮಲತಾ ತಮ್ಮ ಕನಸಿನ ಸಿ.ಎಂ ಪಾತ್ರವನ್ನು ಮಾಡಿ ಮುಗಿಸಿದ್ದಾರೆ.
ಈ ‘ಹೋಪ್’ ಸಿನಿಮಾದಲ್ಲಿ ಶ್ವೇತಾ ಶ್ರೀವಾತ್ಸವ್ ನಾಯಕಿ. ಪ್ರಕಾಶ್ ಬೆಳವಾಡಿ , ಪ್ರಮೋದ್ ಶೆಟ್ಟಿ ಹಾಗೂ ಸುಮಲತಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಪೋಸ್ಟರ್ ಬಿಟ್ಟು ತಮ್ಮ ಪ್ರಚಾರದ ಕಾರ್ಯವನ್ನು ಹೋಪ್ ಸಿನಿಮಾ ತಂಡ ಈಗ ಆರಂಭಿಸಿದೆ. ತೆರೆಯ ಮೇಲೆ ಸಿ.ಎಂ ಸುಮಲತಾ ನಟನೆ ನೋಡಲು ಇನ್ನೂ ಕೆಲವು ದಿನ ಅಭಿಮಾನಿಗಳು ಕಾಯಲೇ ಬೇಕಿದೆ.
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್