ಮಂಡ್ಯ : ನಿನ್ನೆ ನಡೆದ 14 ಲೋಕಸಭಾ ಕ್ಷೇತ್ರಗಳ ಪೈಕಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಶೇ.81.67 ಮತದಾನವಾಗಿದೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮತದಾನವಾಗಿದೆ.
ರಾಜ್ಯದಲ್ಲಿನ ಮೊದಲ ಹಂತದಲ್ಲಿ ನಡೆದ ಮತದಾನದಲ್ಲಿ ಹೆಚ್ಚು ಮತದಾನವಾದ ಕ್ಷೇತ್ರವಾಗಿದೆ.
ಇದನ್ನು ಓದಿ –ಮಂಡ್ಯ , ಬೆಂಗಳೂರು ಕ್ಷೇತ್ರದ 9 ಗಂಟೆ ತನಕದ ಮತದಾನದ ವಿವರ
ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರದಲ್ಲಿನ ಮತದಾನದ ವಿವರ :
- ಮಳವಳ್ಳಿ- 77.23%, ಮದ್ದೂರು – 82.99%, ಮೇಲುಕೋಟೆ -87.20%, ಮಂಡ್ಯ -77%,
- ಶ್ರೀರಂಗಪಟ್ಟಣ-84.48%, ನಾಗಮಂಗಲ – 84.73%, ಕೆ.ಆರ್.ಪೇಟೆ-80.63%,ಕೆ ಆರ್ ನಗರ ಕ್ಷೇತ್ರದಲ್ಲಿ 80.50% ರಷ್ಟು ಮತದಾನವಾಗಿದೆ.
- ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ 80.41 ರಷ್ಟು ಮತದಾನವಾಗಿತ್ತು, ಈ ಬಾರಿ 1.26 ರಷ್ಟು ಹೆಚ್ಚಿನ ಮತದಾನವಾಗಿದೆ,
- ಕ್ಷೇತ್ರ ವ್ಯಾಪ್ತಿಯ 1779243 ಮತದಾರರ ಪೈಕಿ 1453067 ಮತದಾರರು ಹಕ್ಕು ಚಲಾಯಿಸಿದ್ದಾರೆ ,
- ಈ ಪೈಕಿ 720520 ಪುರುಷರು,732503 ಮಹಿಳೆಯರಾಗಿದ್ದಾರೆ 44 ಇತರರಾಗಿದ್ದಾರೆ.
- ಮಳವಳ್ಳಿಯಲ್ಲಿ 195889 ಮತದಾರರು ಹಕ್ಕು ಚಲಾಯಿಸಿದ್ದು,ಈ ಪೈಕಿ 98146 ಪುರುಷರು,97741ಮಹಿಳೆಯರು ಮತ ಚಲಾಯಿಸಿದ್ದಾರೆ,
- ಮದ್ದೂರಿನಲ್ಲಿ 179038 ಮತದಾರರು ಮತದಾನ ಮಾಡಿದ್ದು, ಈ ಪೈಕಿ 87331 ಪುರುಷರು 91702 ಮಹಿಳೆಯರು ಮತ ಚಲಾವಣೆ ಮಾಡಿದ್ದಾರೆ,
- ಮೇಲುಕೋಟೆ ಕ್ಷೇತ್ರದಲ್ಲಿ 177368 ಮತದಾರರು ಮತ ಚಲಾಯಿಸಿದ್ದರೆ ಇವರಲ್ಲಿ 88175 ಪುರುಷರು,89189 ಮಹಿಳೆಯರಾಗಿದ್ದಾರೆ,
- ಮಂಡ್ಯ ಕ್ಷೇತ್ರದಲ್ಲಿ 176841 ಮತದಾರರು ಮತದಾನ ಮಾಡಿದ್ದು, ಈ ಪೈಕಿ 86970 ಪುರುಷರು,89859 ಮಹಿಳೆಯರಾಗಿದ್ದಾರೆ,
- ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ 183851 ಮತದಾರರು ಮತ ಹಕ್ಕು ಚಲಾಯಿಸಿದ್ದು, ಇವರಲ್ಲಿ 90507 ಪುರುಷರು,93336 ಮಹಿಳೆಯರಾಗಿದ್ದಾರೆ,
- ನಾಗಮಂಗಲ ಕ್ಷೇತ್ರದಲ್ಲಿ 183480 ಮತದಾರರು ಮತದಾನ ಮಾಡಿದ್ದು, ಈ ಪೈಕಿ 92195 ಪುರುಷರು,91281 ಮಹಿಳೆಯರಾಗಿದ್ದಾರೆ,
- ಕೆ ಆರ್ ಪೇಟೆ ಕ್ಷೇತ್ರದಲ್ಲಿ 180477 ಮತದಾರರು ಮತ ಹಕ್ಕು ಚಲಾಯಿಸಿದ್ದರೆ ಇವರಲ್ಲಿ 89362 ಪುರುಷರು, 91112 ಮಹಿಳೆಯರಾಗಿದ್ದಾರೆ,
- ಕೆ ಆರ್ ನಗರ ಕ್ಷೇತ್ರದಲ್ಲಿ 176123 ಮತದಾರರು ಮತದಾನ ಮಾಡಿದ್ದರೆ ಇವರಲ್ಲಿ 87834 ಪುರುಷರು,88283 ಮಹಿಳೆಯರಾಗಿದ್ದಾರೆ.
More Stories
ಓದಿನ ಮಹತ್ವ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು