March 11, 2025

Newsnap Kannada

The World at your finger tips!

rape

ಮಂಡ್ಯ: ಬಾಲಕಿಗೆ ಕೇಕ್‌ ನೀಡಿದ ಕಾಮುಕರು ಚಾಕು ಬೆದರಿಕೆ ಹಾಕಿ ಗ್ಯಾಂಗ್‌ ರೇಪ್‌

Spread the love

ಮಂಡ್ಯ: ನಗರದ ಹೊರವಲಯದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಮೂರು ಕಾಮುಕರು 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

ಘಟನೆ ಜನವರಿ 31ರಂದು ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಪ್ಪಿತಸ್ಥರು ಬಾಲಕಿಗೆ ಮೊದಲು ಕೇಕ್ ನೀಡಿದ್ದು, ನಂತರ ಚಾಕು ತೋರಿಸಿ ಬೆದರಿಸಿ, ಸರ್ಕಾರಿ ಶಾಲಾ ಆವರಣದಲ್ಲೇ ಅತ್ಯಾಚಾರವೆಸಗಿದ್ದಾರೆ.

ಈ ದಾರುಣ ಘಟನೆ ಬಾಲಕಿಗೆ ಋತುಮತಿ ಆದ ಬಳಿಕವೂ ಹೊಟ್ಟೆ ನೋವು ಮತ್ತು ನಿರಂತರ ರಕ್ತಸ್ರಾವದಿಂದಾಗಿ ಬೆಳಕಿಗೆ ಬಂದಿದೆ. ಕುಟುಂಬ ಸದಸ್ಯರು ವಿಚಾರಿಸಿದಾಗ, ಬಾಲಕಿ ತನ್ನ ಚಿಕ್ಕಮ್ಮನ ಬಳಿ ಈ ಅಮಾನುಷ ಕೃತ್ಯದ ಬಗ್ಗೆ ವಿವರಿಸಿದ್ದಾಳೆ.

ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಕ್ಕೆ ಭೇಟಿ ನೀಡಿದ ಪೊಲೀಸರು ಬಾಲಕಿಯ ಆರೋಗ್ಯ ಸ್ಥಿತಿ ವಿಚಾರಿಸಿ, ವೈದ್ಯರಿಂದ ಮಾಹಿತಿ ಪಡೆದಿದ್ದಾರೆ.ಇದನ್ನು ಓದಿ -ಕೆರೆಗೆ ಈಜಲು ತೆರಳಿದ ಇಬ್ಬರು ಬಾಲಕರು ನೀರುಪಾಲು

ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ತಪ್ಪಿತಸ್ಥರ ಪತ್ತೆಗೆ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!