December 23, 2024

Newsnap Kannada

The World at your finger tips!

WhatsApp Image 2022 06 13 at 12.49.23 PM

Mandya; friend sets fire to a women and attempts to murder in Mysore

ಮಂಡ್ಯ; ಗೆಳತಿ ಗುಡ್ಡದ ಬಳಿ ಬೆಂಕಿ ಹಚ್ಚಿ ಮೈಸೂರು ಮಹಿಳೆ ಕೊಲೆಗೆ ಯತ್ನ

Spread the love

ಹಾಡುಹಗಲೇ ಮಹಿಳೆಯ ಕೊಲೆಗೆ ಯತ್ನಿಸಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗೆಳತಿ ಗುಡ್ಡದ ಬಳಿ ನಡೆದಿದೆ.

ಇದನ್ನು ಓದಿ –ಸರ್ಕಾರಿ ನೌಕರರಿಗೆ ಜುಲೈನಲ್ಲಿ ಶೇ 5 ರಷ್ಟು ಡಿಎ ಹೆಚ್ಚಳ ?

ಪ್ರಭಾ (40) ಹಲ್ಲೆಗೊಳಗಾಗಿ ಆಸ್ಪತ್ರೆ ದಾಖಲಾಗಿರುವ ಮಹಿಳೆಯಾಗಿದ್ದಾರೆ. ಮಹಿಳೆಗೆ ಪರಿಚಯವಿದ್ದ ಬೆಂಗಳೂರಿನ ಗೊಲ್ಲರಹಟ್ಟಿಯ ನಿವಾಸಿ ಬಸವರಾಜು ಕೊಲೆ ಯತ್ನ ನಡೆಸಿದ ವ್ಯಕ್ತಿ. ಗೆಳತಿ ಗುಡ್ಡಕ್ಕೆ ಹೋಗುವ ರಸ್ತೆಯಲ್ಲಿ ಘಟನೆ ನಡೆದಿದೆ.

ಪ್ರಭಾ ಪತಿ ಪಾಪಣ್ಣ 3 ವರ್ಷದ ಹಿಂದೆ ಮೃತಪಟ್ಟಿದ್ದ ಎನ್ನಲಾಗಿದೆ, ಆ ಬಳಿಕ ಗಾರೆ ಕೆಲಸ ಮಾಡುತ್ತಿದ್ದ ಬಸವರಾಜು, ಪ್ರಭಾಗೆ ಪರಿಚಯವಾಗಿದ್ದರಂತೆ. ಇಬ್ಬರ ನಡುವಿನ ಪರಿಚಯ ಅಕ್ರಮ ಸಂಬಂಧಕ್ಕೆ ದಾರಿ ಮಾಡಿತ್ತು ಎನ್ನಲಾಗಿದೆ

ಈ ನಡುವೆ ಶುಕ್ರವಾರ ಮಹದೇಶ್ವರ ಬೆಟ್ಟಕ್ಕೆ ಮಹಿಳೆಯನ್ನು ಬಸವರಾಜು ಕರೆದುಕೊಂಡು ಬಂದಿದ್ದನಂತೆ. ಬಳಿಕ ಎರಡು ದಿನ ಮೈಸೂರಿನ ಲಾಡ್ಜ್ ವೊಂದರಲ್ಲಿ ಉಳಿದುಕೊಂಡಿದ್ದ ಬಸವರಾಜು, ಪ್ರಭಾ ಮೈಸೂರಿನಿಂದ ಹೊರಟು ನಾಗಮಂಗಲ ಬಳಿಯ ಸೂಳೆ ಕೆರೆ ನೋಡಲು ಬಂದಿದ್ದರಂತೆ.

ಸೂಳೆ ಕೆರೆಗೆ ಹೋಗುವ ಮಾರ್ಗ ಮಧ್ಯೆ ಗೆಳತಿ ಗುಡ್ಡದ ಬಳಿ ಬಸವರಾಜು ತನ್ನ ಜೊತೆ ತಂದಿದ್ದ ಮಚ್ಚಿನಿಂದ ಪ್ರಭಾ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾನೆ. ಅಲ್ಲದೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ಹಠಾತ್ ದಾಳಿಯಿಂದ ತಪ್ಪಿಸಿಕೊಳ್ಳಲು ಬೆಂಕಿ ಹೊತ್ತಿಕೊಂಡ ಕೂಡಲೇ ಪ್ರಭಾ ರಸ್ತೆಗೆ ಓಡಿ ಬಂದಿದ್ದು, ಈ ವೇಳೆ ಸ್ಥಳೀಯರು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೇ ಚಿಕಿತ್ಸೆಗೆ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪ್ರಭಾ ಅವರ ದೇಹದ ಶೇ.40 ರಷ್ಟು ಭಾಗ ಸುಟ್ಟುಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನಾಗಮಂಗಲ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Copyright © All rights reserved Newsnap | Newsever by AF themes.
error: Content is protected !!