ರೌಡಿ ಶೀಟರ್ ಒಬ್ಬನ ಪತ್ನಿ ಜತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಿಯಕರನಿಗೆ ಆಕೆಯ ಗಂಡನೇ (ರೌಡಿ) ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮಂಡ್ಯ ಹೊಸಹಳ್ಳಿಯಲ್ಲಿ ಜರುಗಿದೆ. ಪ್ರಿಯಕರನಿಗೆ ಹಲ್ಲೆ ಮಾಡುವ ದೃಶ್ಯ ನಗರದಲ್ಲಿ ವೈರಲ್ ಆಗಿದೆ.
ಹರ್ಷಿತಾ ಮತ್ತು ಈಕೆಯ ಪ್ರಿಯಕರ ಚೇತನ್ಗೆ ಇಬ್ಬರ ಮೇಲೂ ಆತ ಹಲ್ಲೆ ಮಾಡಿದ್ದಾನೆ.
ರೌಡಿಶೀಟರ್ ನಾಗೇಂದ್ರ ಅಲಿಯಾಸ್ ಕುಳ್ಳನಾಗನ ಪತ್ನಿ ಹರ್ಷಿತಾ. ಪ್ರೀತಿಸಿ ಮದುವೆಯಾಗಿದ್ದ ಹರ್ಷಿತಾ ಹಾಗೂ ಕುಳ್ಳನಾಗ ದಂಪತಿಗೆ 8 ವರ್ಷದ ಮಗನಿದ್ದಾನೆ.
ಈ ಕುಳ್ಳನಾಗನ ಜತೆ ಪತ್ನಿ
ತನ್ನ ಮನೆಯಲ್ಲೇ ಪತ್ನಿ ಹರ್ಷಿತಾ ಮತ್ತು ಈಕೆಯ ಪ್ರಿಯಕರ ಇಬ್ಬರೂ ಒಟ್ಟಿಗೆ ಸಿಕ್ಕಿಬಿದದ್ದಿದ್ದಾರೆ, ಅಕ್ರಮ ಸಂಬಂಧ ಇದೆ ಎಂದು ಶಂಕಿಸಿ ದೋಸೆ ತವದಲ್ಲಿ ಚೇತನ್ ಮೇಲೆ ಕುಳ್ಳನಾಗ ಮನಸೋಇಚ್ಛೆ ಹಲ್ಲೆ ಮಾಡಿದ್ದಾನೆ.
ಹಲ್ಲೆ ನಡೆಸಲು ರೌಡಿಶೀಟರ್ ಕುಳ್ಳನಾಗನಿಗೆ ಸ್ನೇಹಿತ ಯೋಗೇಶ್ ಅಲಿಯಾಸ್ ಕಟ್ಟೆ ಯೋಗೇಶ್ ಸಹಾಯ ಮಾಡಿದನು ಎಂದು ದೂರಲಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಚೇತನ್‌ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆ ಆರೋಪಿಗಳಾದ ಕುಳ್ಳನಾಗ ಮತ್ತು ಯೋಗೇಶ್ನನ್ನು ಬಂಧಿಸಲಾಗಿದೆ.
ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತ ಕುಳ್ಳನಾಗನಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
- ಸುಮಲತಾ ಆಪ್ತ ಬೇಲೂರು ಸೋಮು ಕಾಂಗ್ರೆಸ್ ಗೆ ಸೇರ್ಪಡೆ
- ಪ್ರಥಮ ಪಿಯುಸಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು
- ಖಾಸಗಿ ವಾಹನಗಳಿಗೆ ಮಾಸಿಕ ಮತ್ತು ವಾರ್ಷಿಕ ಟೋಲ್ ಪಾಸ್ ಪರಿಚಯಿಸಲು ಸರ್ಕಾರ ತೀರ್ಮಾನ
- ಬೆಂಗಳೂರಿನಲ್ಲಿ ಜನವರಿ 17ರಿಂದ ಯುಎಸ್ ಕಾನ್ಸುಲೇಟ್ ಕಚೇರಿ ಕಾರ್ಯಾರಂಭ
- ವಿಚಿತ್ರ ಕಾಯಿಲೆಗೆ 15 ಜನರು ಬಲಿಪಡೆದ ಅನುಮಾನಾಸ್ಪದ ಘಟನೆ
More Stories
ಬೆಂಗಳೂರಿನಲ್ಲಿ ಜನವರಿ 17ರಿಂದ ಯುಎಸ್ ಕಾನ್ಸುಲೇಟ್ ಕಚೇರಿ ಕಾರ್ಯಾರಂಭ
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ದಾಳಿ – ಆಸ್ಪತ್ರೆಯಲ್ಲಿ ಚಿಕಿತ್ಸೆ
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು