ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಕುಬೇರನೊಬ್ಬನನ್ನು ಕಣಕ್ಕಿಳಿಸಲು ಮುಂದಾಗಿರುವ ಪಕ್ಷದ ನಾಯಕರ ವಿರುದ್ಧ ಅಸಮಾಧ ಸ್ಫೋಟ ಗೊಂಡಿದೆ . ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಡಾ.ಎಚ್. ಎನ್ ರವೀಂದ್ರ ರಾಜೀನಾಮೆ ಸಲ್ಲಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಪಕ್ಷದ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರ ಜೊತೆ ಚರ್ಚೆ ಮಾಡದೆ ಏಕ ಪಕ್ಷಿಯ ವಾಗಿ ಅಭ್ಯರ್ಥಿ ಆಯ್ಕೆ ಮಾಡಲು ಮುಂದಾಗಿರುವ ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು ಪಕ್ಷದ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ.
ಮಂಡ್ಯದ ಕರ್ನಾಟಕ ಸಂಘದ ಕೆ ವಿ ಎಸ್ ಶತಮಾನೋತ್ಸವ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸ್ಥಳೀಯರು ಚುನಾವಣೆಗೆ ಸ್ಪರ್ಧಿಸುವ ಅರ್ಹತೆ ಹೊಂದಿದ್ದಾರೆ, ಆದರೂ ಸಹ ಹೊರಗಿನವರಿಗೆ ಮನ್ನಣೆ ನೀಡಲಾಗುತ್ತಿದೆ, ಚುನಾವಣೆಗೆ ಸ್ಪರ್ಧಿಸಲು ಹಣವೇ ಮಾನದಂಡನಾ, ಜಿಲ್ಲೆಯ ಸಾಮಾನ್ಯ ಕುಟುಂಬ ವರ್ಗದವರು ಪ್ರತಿ ವರ್ಷ ದೇವರ ಸೇವೆ ಮಾಡಿ ನೂರಾರು ಜನಕ್ಕೆ ಊಟ ಹಾಕುತ್ತಾರೆ,ಆದರೆ ಕಾಂಗ್ರೆಸ್ ನಾಯಕರು ಅನ್ನ ಹಾಕುವ ಜನರನ್ನು ದುಡ್ಡಿನಲ್ಲಿ ಅಳೆಯಲು ಮುಂದಾಗಿದ್ದಾರೆ, ದುಡ್ಡು ಕೊಡದಿದ್ದರೆ ಜಿಲ್ಲೆಯ ಜನತೆ ಮತ ಹಾಕೊಲ್ಲ ಎಂದು ಜಿಲ್ಲೆಯ ಜನರನ್ನು ಅವಮಾನಿಸಲು ಮುಂದಾಗಿದ್ದಾರೆ ಎಂದರು.
ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ಜಾತ್ಯತೀತ ಜನತಾದಳದ ಏಳು ಶಾಸಕರು, ವಿಧಾನ ಪರಿಷತ್ ನ ಮೂವರು ಸದಸ್ಯರು ಅಷ್ಟೇ ಏಕೆ ರಾಜ್ಯದ ಮುಖ್ಯಮಂತ್ರಿ ಯಾಗಿದ್ದ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದರು, ಆದರೆ ಜಿಲ್ಲೆಯ ಜನತೆ ತಿರಸ್ಕಾರ ಮಾಡಿದ್ದರು,ಇದೀಗ ಕಾಂಗ್ರೆಸ್ ಪಕ್ಷದ ಶಾಸಕರು ಲೋಕಸಭಾ ಕ್ಷೇತ್ರದ ಏಳು ಕ್ಷೇತ್ರದಲ್ಲಿ ಇದ್ದಾರೆ ಎಂದು ಬೀಗುತ್ತಿರುವ ಕಾಂಗ್ರೆಸ್ ನಾಯಕರು ಇದನ್ನ ಅರಿಯಬೇಕು ಎಂದರು.
ಇತಿಹಾಸದಿಂದ ಪಾಠ ಕಲಿಯಲು ಮುಂದಾಗಬೇಕು, ಇಲ್ಲದಿದ್ದರೆ ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ, ಸಾಹುಕಾರ್ ಚೆನ್ನಯ್ಯ ಮುಖ್ಯಮಂತ್ರಿ ಯಾಗುವ ಅವಕಾಶ ಬಂದಾಗ ಸೋತರು, ಎಸ್.ಎಂ ಕೃಷ್ಣ ಕೇಂದ್ರ ಕ್ಯಾಬಿನೆಟ್ ನಲ್ಲಿ ಸಚಿವರಾಗುವ ಸಂದರ್ಭ ಇತ್ತು, ಆದರೂ ಸಹ ಜಿಲ್ಲೆಯ ಜನತೆ ಅವರಿಗೆ ಮಣ್ಣು ಮುಕ್ಕಿಸಿದರು ಎಂಬುದನ್ನು ತಿಳಿಯಿರಿ ಎಂದರು.
ಹಣ ಇದ್ದವರಿಗೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಎಂಬ ಮಾನದಂಡ ಸರಿಯಲ್ಲ, ಕುಬೇರರಿಗೆ ಮಾತ್ರ ಮನ್ನಣೆ ನೀಡುವುದು ಸರಿಯಲ್ಲ, ಲೋಕಸಭೆ ಚುನಾವಣೆಯಲ್ಲಿ ಹಣ ಇದ್ದವರಿಗೆ ಮನ್ನಣೆ ನೀಡಿದರೆ ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯತಿಗೊ ಹೊರಗಿನಿಂದಲೇ ಹಣ ಇರುವ ಅಭ್ಯರ್ಥಿಯನ್ನು ಕರೆ ತರುವ ಚಾಳಿ ಮುಂದುವರೆಸಲಿದ್ದಾರೆ, ಸ್ಥಳೀಯ ಮುಖಂಡರು ಕಾರ್ಯಕರ್ತರನ್ನ ನಿನಗೇನು ಅಧಿಕಾರ ಕೊಡದೊ ಗೇಮೇ ಮಾಡಿ ಎಂದು ನೀವು ಜೈಕಾರ ಹಾಕಿದ ನಾಯಕರೇ ಹೇಳುತ್ತಾರೆ, ಸತ್ತ ಮೇಲೆ ನಿಮಗೆ ಯಾವುದೇ ಪಕ್ಷ ಇಲ್ಲ ಈಗಲೇ ಎಚ್ಚೆತ್ತುಕೊಳ್ಳಿ ಎಂದರು.ಚುನಾವಣಾ ಅಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ
ಕಾಂಗ್ರೆಸ್ ಪಕ್ಷದ ಹುದ್ದೆಗೆ ಮಾತ್ರ ರಾಜೀನಾಮೆ ನೀಡಿದ್ದೇನೆ, ಪಕ್ಷ ತೊರೆಯುವ ಪ್ರಶ್ನೆ ಇಲ್ಲ, ಆದರೆ ಕಾಂಗ್ರೆಸ್ ಪಕ್ಷದ ಉಳಿವಿಗಾಗಿ ಹೋರಾಟ ಮುಂದುವರೆಯಲಿದೆ, ಪಕ್ಷದಲ್ಲಿನ ಗ್ಯಾಂಗ್ರಿನ್ ಗೆ ಅಂತ್ಯ ಹಾಡ ಬೇಕಾಗಿದೆ, ಇದಕ್ಕಾಗಿ ತುರ್ತು ಆಪರೇಷನ್ ಅಗತ್ಯವಾಗಿದೆ, ಅದಕ್ಕಾಗಿ ಆಸ್ಪತ್ರೆ ಹುಡುಕಾಟದಲ್ಲಿದ್ದೇನೆ ಎಂದರು.
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ