ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ಆರೋಪಿಯು ಇಬ್ಬರಿಂದ 31 ಲಕ್ಷ ರೂ. ವಂಚಿಸಿದ್ದಾನೆ. ಈ ಕುರಿತು ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈತನಿಂದ ಮಂಡ್ಯ ಗಾಂಧಿನಗರದ ನೇತ್ರಾವತಿ ಮತ್ತು ಕಲ್ಲಹಳ್ಳಿಯ ಮಲ್ಲೇಶ್ ವಂಚನೆಗೆ ಒಳಗಾಗಿದ್ದಾರೆ ಎಂದು ವಿವರಿಸಿದರು.
ಆರೋಪಿ ಹೆಚ್.ಸಿ. ವೆಂಕಟೇಶ್ ತಾನು ಬೆಂಗಳೂರಿನ ವಿಧಾನಸೌಧದಲ್ಲಿ ಕೆಲಸ ಮಾಡುತ್ತಿರುವುದಾಗಿ ನಂಬಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಹುದ್ದೆಗೆ ಮತ್ತು ವಾಣಿಜ್ಯ ಇಲಾಖೆಯ ಹಿರಿಯ ಅಧಿಕಾರಿ ಹುದ್ದೆಗೆ ನೇಮಕ ಮಾಡಿಸುತ್ತೇನೆ ಎಂಬಂತೆ ಜನರನ್ನು ಮೋಸ ಮಾಡಿದ್ದಾನೆ.
ನೇತ್ರಾವತಿ ಎಂಬುವರ ಇಬ್ಬರು ಮಕ್ಕಳಿಗೆ ಉದ್ಯೋಗ ಕೊಡಿಸುವುದಾಗಿ ಹೆಚ್.ಸಿ. ವೆಂಕಟೇಶ್ ನಂಬಿಸಿ, ಒಬ್ಬ ಮಗನಿಗೆ ಉಪ ನಿರ್ದೇಶಕರ ಹುದ್ದೆ ನೀಡುವುದಾಗಿ ಹೇಳಿ 12.24 ಲಕ್ಷ ರೂ. ವಂಚಿಸಿದ್ದಾನೆ. ಇದಕ್ಕಾಗಿ ನಕಲಿ ನೇಮಕಾತಿ ಪತ್ರ ಸೃಷ್ಟಿಸಿ, ಸರ್ಕಾರಿ ಅಧಿಕಾರಿಗಳ ಸಹಿಯನ್ನು ನಕಲು ಮಾಡಿದ್ದಾನೆ.
ಇನ್ನೊಂದು ಪ್ರಕರಣದಲ್ಲಿ, ಕಲ್ಲಹಳ್ಳಿಯ ಮಲ್ಲೇಶ್ ಪತ್ನಿಗೆ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಹಿರಿಯ ಲೆಕ್ಕಾಧಿಕಾರಿಯಾಗಿ ನೇಮಕ ಮಾಡಿಸುವುದಾಗಿ ಭರವಸೆ ನೀಡಿ 19 ಲಕ್ಷ ರೂ. ವಂಚಿಸಿದ್ದಾನೆ. ವಂಚನೆಯ ಭಾಗವಾಗಿ, ಸರ್ಕಾರದ ಅಧೀನ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಕಂದಾಯ ಇಲಾಖೆ ಮತ್ತು ಸಿಎಂ ಸಿದ್ದರಾಮಯ್ಯ ಸಹಿ ಇರುವ ನಕಲಿ ಟಿಪ್ಪಣಿಗಳನ್ನು ಸೃಷ್ಟಿಸಿ, ವಾಟ್ಸಾಪ್ ಮೂಲಕ ಕಳುಹಿಸಿದ್ದಾನೆ.
ಆದರೆ, ಒಂದು ತಿಂಗಳಾದರೂ ಕೆಲಸ ಪಡೆಯಲು ಸಾಧ್ಯವಾಗದಾಗ, ಮಲ್ಲೇಶ್ ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ವಿಚಾರಣೆ ನಡೆಸಿದಾಗ, ವೆಂಕಟೇಶ್ ನೀಡಿದ ಎಲ್ಲಾ ದಾಖಲೆಗಳು ಸುಳ್ಳು ಎಂಬುದು ಬಹಿರಂಗಗೊಂಡಿತು.ಇದನ್ನು ಓದಿ –ಪ್ರಯಾಗ್‌ರಾಜ್ ಕುಂಭಮೇಳಕ್ಕೆ ತೆರಳಿದ್ದ ಕುಟುಂಬ – 6 ಮಂದಿ ಅಪಘಾತದಲ್ಲಿ ದುರ್ಮರಣ
ಈ ಸಂಬಂಧ, ಪೊಲೀಸರು ಈಗಾಗಲೇ ಆರೋಪಿಯನ್ನು ಬಂಧಿಸಿದ್ದು, ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು