ಹೊಸದುರ್ಗ ತಹಶೀಲ್ದಾರ್ ತಿಪ್ಪೇಸ್ವಾಮಿ ಎತ್ತಂಗಡಿ: ಮಲ್ಲಿಕಾರ್ಜುನ್ ಹೊಸ ತಹಶೀಲ್ದಾರ್

Team Newsnap
1 Min Read

ತಾಲೂಕಿನಲ್ಲಿ ಬಲವಂತದ ಮತಾಂತರವಾಗಿಲ್ಲ ಎಂದು ವರದಿ ನೀಡಿರುವ ಹೊಸದುರ್ಗ ತಹಶೀಲ್ದಾರ್ ತಿಪ್ಪೇಸ್ವಾಮಿಯನ್ನು ರಾಜ್ಯ ಸರ್ಕಾರ ಎತ್ತಂಗಡಿ ಮಾಡಿದೆ.

ತಹಶೀಲ್ದಾರ್‌ಗೆ ಸ್ಥಳ ನಿಯೋಜನೆ ಮಾಡದೇ ತಿಪ್ಪೇಸ್ವಾಮಿ ಅವರನ್ನು ಎತ್ತಂಗಡಿ ಮಾಡಿಸಿದ್ದಾರೆ. ಹೊಸದುರ್ಗಕ್ಕೆ ನೂತನ ತಹಶೀಲ್ದಾರ್ ಆಗಿ ಮಲ್ಲಿಕಾರ್ಜುನ್ ಅವರನ್ನು ನಿಯೋಜಿಸಲಾಗಿದೆ.

ಕಳೆದ ವಿಧಾನಸಭೆ ಅಧಿವೇಶನದಲ್ಲಿ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ , ಸ್ವತಃ ಅವರ ತಾಯಿ‌ ಸೇರಿದಂತೆ ಸುಮಾರು 140 ಕ್ಕೂ ಅಧಿಕ‌ ಹಿಂದೂಗಳು, ಕ್ರೈಸ್ತ ಧರ್ಮಕ್ಕೆ ‌ಮತಾಂತರವಾಗಿದ್ದಾರೆ. ಅವರಿಗೆ ಇಲ್ಲಸಲ್ಲದ ಆಮಿಷವೊಡ್ಡಿ, ಒತ್ತಾಯಪೂರ್ವಕವಾಗಿ ಕ್ರೈಸ್ತ‌ಮಿಷಿನರಿಗಳು ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಸರ್ಕಾರದ ಆದೇಶದಂತೆ ಸ್ಥಳ ಪರಿಶೀಲನೆ ನಡೆಸಿದ್ದ ಹೊಸದುರ್ಗದ ತಹಶೀಲ್ದಾರ್ ತಿಪ್ಪೇಸ್ವಾಮಿ , ನವೆಂಬರ್ 30 ರಂದು ಚಿತ್ರದುರ್ಗ ಜಿಲ್ಲಾಧಿಕಾರಿ ಮೂಲಕ ಪರಿಶೀಲನೆ ನಡೆಸಿದ್ದು, ತಾಲೂಕಿನಾದ್ಯಂತ ಬಲವಂತದ ಮತಾಂತರವಾಗಿಲ್ಲ. ಅವರೆಲ್ಲರೂ ಸ್ವಇಚ್ಛೆಯಿಂದ ಪೂಜಾ ಕೈಂಕರ್ಯ ಹಾಗೂ ಪ್ರಾರ್ಥನೆ ಸಲ್ಲಿಸುತಿದ್ದಾರೆಂದು ಸರ್ಕಾರಕ್ಕೆ ವರದಿ ನೀಡಿದ್ದರು.

ಈ ವರದಿಯಿಂದ ಆಕ್ರೋಶಗೊಂಡ ಶಾಸಕ ಗೂಳಿಹಟ್ಟಿ ಶೇಖರ್ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ತಹಶೀಲ್ದಾರ್‌ ಎತ್ತಂಗಡಿ ಮಾಡುವ ಮೂಲಕ ಬಿಗ್‌ ಶಾಕ್‌ ನೀಡಿದ್ದಾರೆ.

Share This Article
Leave a comment