ಯೋಗೇಶ್ ಗೌಡ ಪ್ರಕರಣ ತನಿಖೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಯೋಗೇಶ್ ಪತ್ನಿ ಮಲ್ಲಮ್ಮ ಕೇಸ್ ಮುಚ್ಚಿ ಹಾಕಲು 1 ಕೋಟಿ 60 ಲಕ್ಷ ರು ಡೀಲ್ ಆಗಿದ್ದಳು ಎಂಬ ಅಂಶವನ್ನು ಸಿಬಿಐ ಬಯಲು ಮಾಡಿದೆ.
ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಮಲ್ಲಮ್ಮ ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುವ ಸಾಧ್ಯತೆ ಇದೆ.
ವಿನಯ ಕುಲಕರ್ಣಿ ಆಪ್ತ ರಾಗಿದ್ದ ನಾಗರಾಜ್ ಗೌರಿ ಮತ್ತು ಮುತ್ತಗಿ ಎಂಬುವರರ ಮೂಲಕ ಮಲ್ಲಮ್ಮನಿಗೆ ಡೀಲ್ ಮಾಡಲಾಗಿತ್ತು. ಇದರ ಮೊದಲ ಕಂತಾಗಿ 60 ಲಕ್ಷ ರು ಗಳನ್ನು ಆಕೆಗೆ ಸಂದಾಯ ಮಾಡಲಾಗಿತ್ತು ಎಂದು ಹೇಳಲಾಗಿದೆ. ಹೆಂಡತಿಗೆ ದುಡ್ಡು ಕೊಟ್ಟು ಕೊಲೆ ಪ್ರಕರಣವನ್ನು ವಿನಯ್ ಕುಲಕರ್ಣಿ ಮುಚ್ಚಿ ಹಾಕುವ ತಂತ್ರ ಮಾಡಿದ್ದರು ಎಂಬ ಅಂಶವೂ ಬಯಲಾಗಿದೆ.
ಸಿಬಿಐ ಈಗಾಗಲೇ ನಾಗರಾಜ್ ಗೌರಿ ಮತ್ತು ಮುತ್ತಗಿ ಅವರನ್ನು ವಿಚಾರಣೆಗೆ ಒಳಪಡಿಸಿ ಮಹತ್ವದ ಸಂಗತಿಯನ್ನು ಹೊರ ತಂದಿದೆ ಎಂದು ಗೊತ್ತಾಗಿದೆ.
ಯೋಗೇಶ್ ಗೌಡ ಪತ್ನಿ ಮಲ್ಲಮ್ಮ ನನ್ನು ಮಾಜಿ ಸಚಿವ ವಿನಯ್ ಕುಲಕರ್ಣಿ ಕಾಂಗ್ರೆಸ್ ಗೆ ಸೇರ್ಪಡೆ ಮಾಡಿಸಿ ಕೊಂಡಿದ್ದರು . ಇದು ಸ್ಥಳೀಯ ಕಾಂಗ್ರೆಸ್ ನಾಯಕರು ಮಲ್ಲಮ್ಮನ ಸೇರ್ಪಡೆ ಗೆ ಭಾರಿ ವಿರೋಧವಿತ್ತು.
- ವಿಚಾರ ಕ್ರಾಂತಿಯ ಯುಗಪುರುಷ ಕುವೆಂಪು
- SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
- ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
- ತುಪ್ಪ ಎಂಬ ಮಹಾ ಔಷಧಿ
- ಸಂಸತ್ ಕಟ್ಟಡದ ಬಳಿ ಬೆಂಕಿ ಹಚ್ಚಿಕೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು
More Stories
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ